ಪುತ್ತೂರು, ಜು. 24 : ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ – ಪುತ್ತೂರು ರಸ್ತೆಯ ಕೆಮ್ಮಾಯಿ ಬಳಿ ರವಿವಾರ ನಡೆದಿದೆ.
ಸೇಡಿಯಾಪು ನಿವಾಸಿ ಚೈತ್ರೇಶ್ ಎಸ್. ಯಾನೆ ಚರಣ್ (20) ಮೃತ ಬೈಕ್ ಸವಾರ.
ಚರಣ್ ಅವರು ಪುತ್ತೂರಿನಿಂದ ಸೇಡಿಯಾಪು ಕಡೆ ಬೈಕ್ ಚಲಾಯಿಸಿ ಹೋಗುತ್ತಿದ್ದಾಗ ಕೆಮ್ಮಾಯಿ ಎಂಬಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಇದರಿಂದಾಗಿ ಸವಾರ ಚರಣ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಪುತ್ತೂರು ಸಂಚಾರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.