ಪುಂಜಾಲಕಟ್ಟೆ, ಆ. 11 : ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಅಂಗನವಾಡಿ ಸಹಾಯಕಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಬಡಗ ಕಜೆಕಾರು ಗ್ರಾಮದ ಕೆದಿಮೇಲು ಎಂಬಲ್ಲಿಆ.6ರಂದು ನಡೆದಿದೆ.
ಮೃತರನ್ನು ಅಂಗನವಾಡಿ ಸಹಾಯಕಿ ಕನೆಜಾಲು ನಿವಾಸಿ ವಸಂತಿ ಕೆದಿಮೇಲು (43) ಎಂದು ಗುರುತಿಸಲಾಗಿದೆ.
ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಅಂಗನವಾಡಿ ಸಹಾಯಕಿ ವಸಂತಿ ನಾಯ್ಕ್ ಅವರು ಕುಸಿದು ಬಿದ್ದು ಅಸೌಖ್ಯಕ್ಕೀಡಾಗಿದ್ದರು. ಇವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.