ಬೆಳಗಾವಿ, ಆ. 21: ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಹಲವು ಪ್ರಯತ್ನಗಳ ನಂತರವೂ ಸಫಲತೆ ಸಿಗದ ಹಿನ್ನೆಲೆಯಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ನಿಪ್ಪಾಣಿ ತಾಲೂಕಿನಲ್ಲಿ ಗುರುವಾರ ನಡೆದಿದೆ.
ಮೃತರನ್ನು ಬೆಳಗಾವಿ ಸಮೀಪದ ನಿಪ್ಪಾಣಿ ತಾಲೂಕಿನ ಹಂಚಿನಾಳ್ ಗ್ರಾಮದ ನಿವಾಸಿ ಅಪ್ಪಾಸೊ ಶಿವಾಜಿ ಪಾನಡೆ (24) ಎಂದು ಗುರುತಿಸಲಾಗಿದೆ.
ಶಿವಾಜಿ ಪಾನಡೆ ಅವರು ಬಾಲ್ಯದಿಂದಲೂ ಸೇನೆಗೆ ಸೇರುವ ಕನಸನ್ನು ಕಂಡಿದ್ದನು. ಅದಕ್ಕಾಗಿ ಹಲವು ಬಾರಿ ಮಾಡಿದ ಪ್ರಯತ್ನಗಳು ಕೈಗೂಡಿರಲಿಲ್ಲ. ಕನಸು ನನಸಾಗದ ಕೊರಗಿನಲ್ಲಿ ಶಿವಾಜಿ ಅವರು ತನ್ನ ಮನೆಯಲ್ಲಿನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ನಿಪ್ಪಾಣಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
3 Comments
Pingback: รับซ่อมเครื่องออกกำลังกาย
Pingback: magic mushrooms sacramento
Pingback: ที่พักพูลวิลล่าพัทยา