ಸುಳ್ಯ, ಆ. 31 : ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರೊಂದು ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ ಘಟನೆ ಅಡ್ಕಾರಿನಲ್ಲಿ ನಡೆದಿದೆ.
ಮೃತರನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿಗಳಾದ ಕಾರ್ಮಿಕರಾದ ಚಂದ್ರಪ್ಪ ರೇಗಪ್ಪ, ಮಾಂತೇಶ್ ಎಂದು ಗುರುತಿಸಲಾಗಿದೆ.
ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಚಂದ್ರಪ್ಪ, ರೇಗಪ್ಪ, ವೆಂಕಪ್ಪ, ಮಾಂತೇಶ್ ಎಂಬವರಿಗೆ ಢಿಕ್ಕಿಯಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರಲ್ಲಿ ವೆಂಕಪ್ಪ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
3 Comments
Pingback: รับงานเชื่อมเหล็ก
Pingback: จดทะเบียน อย
Pingback: mushroom gummies