ಕಾವೂರು, ಜ. 18: ಇಲ್ಲಿನ ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವ ವು ಜ.17, ಬುಧವಾರ ಶ್ರ ದ್ಧಾಭಕ್ತಿಯಿಂದ ನೆರವೇರಿತು.ಅಂದು ಬೆಳಿಗ್ಗೆ ರುದ್ರಾಭಿಷೇಕ, 10.30ಕ್ಕೆ ರಥ ಕಲಶ, ಮಧ್ಯಾಹ್ನ ಮಹಾಪೂಜೆ ನಡೆದು ರಥಾರೋಹಣ ನೆರವೇರಿತು.ಬಳಿಕ ಮಹಾ ಅನ್ನ ಸಂತರ್ಪಣೆ ನಡೆದುರಾತ್ರಿ ಬ್ರಹ್ಮರಥೋತ್ಸವ ಸಂಪನ್ನಗೊಂಡಿತು.
ಬಳಿಕ ಉತ್ಸವ, ಶ್ರೀಭೂತ ಬಲಿ, ಶಯನ, ಕವಾಟ ಬಂಧನ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಸಂಭ್ರಮ
ದಲ್ಲಿ ಪಾಲ್ಗೊಂಡರು.