ಉಳ್ಳಾಲ,ಫೆ. 08 :: ಮಂಗಳೂರಿನ ಪಡೀಲ್ ಸಮೀಪದಲ್ಲಿರುವ ಉಳ್ಳಾಲಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಒಡೆದ ಪರಿಣಾಮ ದುರಸ್ತಿ ಕಾರ್ಯಕ್ಕಾಗಿ ಉಳ್ಳಾಲ ನಗರಕ್ಕೆ 1 ವಾರ ನೀರು ಸರಬರಾಜು ಇರುವುದಿಲ್ಲ ಎಂದು ಉಳ್ಳಾಲ ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.
ಪಂಪ್ವೆಲ್ ಮಹಾವೀರ ವೃತ್ತ ಸಮೀಪದ ಪಡೀಲ್ ರೋಹನ್ ಸ್ಕ್ವೇರ್ ಕಟ್ಟಡದ ಮುಂಭಾಗದಲ್ಲಿ ತುಂಬೆ ಅಣೆಕಟ್ಟಿನಿಂದ ಉಳ್ಳಾಲಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಫೆ. 6 ರಂದು ಹಾನಿಯಾಗಿದೆ.
ಈ ನಿಟ್ಟಿನಲ್ಲಿ ದುರಸ್ತಿ ಕಾರ್ಯಕ್ಕಾಗಿ 1 ವಾರದ ಬೇಕಾಗಿರುವುದರಿಂದ ಉಳ್ಳಾಲ ನಗರಕ್ಕೆ ನೀರು ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕು ಎಂದು ಉಳ್ಳಾಲನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.