ಬಂಟ್ವಾಳ, ಡಿ.13 : ವ್ಯಕ್ತಿಯೋರ್ವರು ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ವಿಟ್ಲದ ಕೊಳ್ನಾಡು ಗ್ರಾಮದ ಕುಳಾಲು ಕುಡ್ತಡ್ಕ ಎಂಬಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕುಡ್ತಡ್ಕ ನಿವಾಸಿ ಸಿಪ್ರಿಯಾನ್ ಮೊಂತೆರೋ ಎಂದು ಗುರುತಿಸಲಾಗಿದೆ.
ಸಿಪ್ರಿಯಾನ್ ಅವರು ಸೋಮವಾರದಿಂದ ಮನೆಗೆ ಹೋಗದೇ ನಾಪತ್ತೆಯಾಗಿದ್ದರು. ಡಿ.11 ರಂದು ಬೆಳಗ್ಗೆ ಹುಡುಕಾಡಿದಾಗ ದಾರಿ ಮಧ್ಯದ ತೋಟದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.