ಉಡುಪಿ, ಡಿ.16 :ಭಾರತದ ಪ್ರಮುಖ ಶಿಪ್ ಯಾರ್ಡ್ – ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ಇಂದು ನಾರ್ವೆಯ ಮೆಸಸ್ ವಿಲ್ಸನ್ ಎಎಸ್ಎಗೆ ನಿರ್ಮಿಲಾಗುತ್ತಿರುವ 3800 ಟಿಡಿಡಬ್ಲ್ಯು ಜನರಲ್ ಕಾರ್ಗೋ ಹಡಗುಗಳ ಸರಣಿಯ ಮೊದಲ ಹಡಗನ್ನು ಇಂದು ಬಿಡುಗಡೆ ಮಾಡಿದೆ.
ರಾಯಲ್ ನಾರ್ವೇಯನ್ ರಾಯಭಾರ ಕಚೇರಿಯ ಮಿನಿಸ್ಟರ್ ಕೌನ್ಸಿಲರ್ ಮತ್ತು ಡೆಪ್ಯುಟಿ ಹೆಡ್ ಆಫ್ ಮಿಷನ್ ಶ್ರೀಮತಿ ಮಾರ್ಟಿನ್ ಆಮ್ಮಾಲ್ ಬೋಥೀಮ್ ಅವರು ವಿಲ್ಸನ್ ಎಎಸ್ಎಯ ಮುಖ್ಯ ಹಣಕಾಸು ಅಧಿಕಾರಿ ಐನಾ ಟೋರ್ನೆಸ್ ಅವರೊಂದಿಗೆ ಹಡಗನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಧು ಎಸ್. ನಾಯರ್, ಕೊಚ್ಚಿನ್ ಶಿಪ್ ಯಾರ್ಡ್ ತಾಂತ್ರಿಕ ನಿರ್ದೇಶಕ ಶ್ರೀ ಬಿಜೋಯ್ ಭಾಸ್ಕರ್, ಉಡುಪಿ-ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿಕುಮಾರ್ ಎ. ಮತ್ತು ಶಿಪ್ ಯಾರ್ಡ್ ನ ಇತರ ಹಿರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿಲ್ಸನ್ ಎಎಸ್ಎ, ನಾರ್ವೆಯ ಬರ್ಗೆನ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಂಪನಿಯಾಗಿದ್ದು, ಯುರೋಪ್ನಲ್ಲಿ ಪ್ರಮುಖ ಕಿರು ಸಮುದ್ರ ನೌಕೆ ನಿರ್ವಾಹಕ ಕಂಪನಿಯಾಗಿದೆ ಮತ್ತು ಯುರೋಪ್ನಾದ್ಯಂತ ಸುಮಾರು 15 ದಶಲಕ್ಷ ಟನ್ ಒಣ ಸರಕುಗಳನ್ನು ಸಾಗಿಸುತ್ತದೆ. ಕಂಪನಿಯು 1500 ರಿಂದ 8500 ಡಿಡಬ್ಲ್ಯು ಕಂಟಿ ವರೆಗಿನ ಸುಮಾರು 130 ಹಡಗುಗಳನ್ನು ನಿರ್ವಹಿಸುತ್ತದೆ.
ಉಡುಪಿ-ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ (ಯುಸಿಎಸ್ಎಲ್), ಮೆಸಸ್ ಕೊನೊಶಿಪ್ ಇಂಟರ್ನ್ಯಾಷನಲ್ ಸಹಯೋಗದೊಂದಿಗೆ ಮೆಸಸ್ ವಿಲ್ಸನ್ ಎ ಎಸ್ ಗಾಗಿ ಅತ್ಯುತ್ತಮ ಹಡಗನ್ನು ನಿರ್ಮಿಸಿಕೊಡುವ ಮೂಲಕ ಅಂತರರಾಷ್ಟ್ರೀಯ ಹಡಗು ನಿರ್ಮಾಣ ಮಾರುಕಟ್ಟೆಯಲ್ಲಿ ಬಲವಾದ ನೆಲೆಯನ್ನು ಸ್ಥಾಪಿಸಿದೆ. ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ಮತ್ತು ಅದರ ಅಂಗಸಂಸ್ಯೆಯಾದ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಎರಡೂ ಪಾಶ್ಚಿಮಾತ್ಯ ಯುರೋಪಿಯನ್ ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ಹಡಗುಗಳನ್ನು ನಿರ್ಮಿಸಲು ತಮ್ಮ ಅಚಲ ಬದ್ಧತೆಯನ್ನು ಪ್ರದರ್ಶಿಸುತ್ತಲೇ ಇವೆ. ಉಡುಪಿ-ಸಿಎಸ್ಎ ಎಲ್ ನ ಅಸ್ತಿತ್ವದಲ್ಲಿರುವ ಗ್ರಾಹಕರಿಂದ ಪುನರಾವರ್ತಿತ ಕಾರ್ಯಾದೇಶಗಳು ಯಾರ್ಡ್ನ ಸಾಮರ್ಥ್ಯಗಳು ಮತ್ತು ಉತ್ಕೃಷ್ಟತೆಯ ಮೇಲೆ ಗ್ರಾಹಕರು ಇರಿಸುವ ನಂಬಿಕೆ ಮತ್ತು ವಿಶ್ವಾಸವನ್ನು ಒತ್ತಿಹೇಳುತ್ತವೆ ಎಂದು ಸಿಎಸ್ಎಲ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಧು ನಾಯರ್ ಹೇಳಿದರು.