ಉಳ್ಳಾಲ,ಡಿ.29 : ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಸೋಮೇಶ್ವರ ಬಳಿ ಆದಿತ್ಯವಾರ ನಡೆದಿದೆ.
ಮೃತರನ್ನು ಬೆಂಗಳೂರು ಶಿವಾಜಿ ನಗರ ಮೂಲದ ಸಜ್ಜಾದ್ ಅಲಿ (45) ಎಂದು ಗುರುತಿಸಲಾಗಿದೆ.
ಬೆಂಗಳೂರು ಮೂಲದ 11 ಮಂದಿಯ ಕುಟುಂಬ ಸುತ್ತಾಡುತ್ತಾ ಆದಿತ್ಯವಾರ ಮಂಗಳೂರಿಗೆ ತಲುಪಿದ್ದರು. ಉಳ್ಳಾಲ ದರ್ಗಾಕ್ಕೆ ತೆರಳಿ ಬಳಿಕ ಅವರು ಸೋಮೇಶ್ವರ ಬೀಚ್ ಗೆ ತೆರಳಿದ್ದು, ಬೀಚ್ ನಲ್ಲಿ ಸಜ್ಜಾದ್ ಅವರ ಸಹೋದರನ ಮಗಳು ನೀರು ಪಾಲಾಗಿದ್ದು, ಆಕೆಯನ್ನು ರಕ್ಷಣೆಗೆ ತೆರಳಿದ ಸಜ್ಜಾದ್ ಅಲಿ ಅವರು ಸಮುದ್ರ ಪಾಲಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.