ಬಂಟ್ವಾಳ, ಡಿ.30 : ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಗರ ಸಂಘದ ವತಿಯಿಂದ ವಿಟ್ಲ ಅಕ್ಷಯ ಸಮುದಾಯ ಭವನದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಡಿ.29, ಆದಿತ್ಯವಾರದಂದು ಜರಗಿತು.
ಅಂದು ಬೆಳಗ್ಗೆ 7ಗಂಟೆಗೆ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳವರ ಪೂರ್ಣಾನುಗ್ರಹದೊಂದಿಗೆ ಶ್ರೀ ಗಣಪತಿ ಹೋಮ, 8 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಗೌಡರ ಯಾನೆ ಒಕ್ಕಲಿಗರ ಮಾತೃ ಸಂಘದ ಅಧ್ಯಕ್ಷರಾದ ಲೋಕಯ್ಯ ಗೌಡ ಅವರು, ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಗರ ಸಂಘದಿಂದ ನಡೆಯುವ ಈ ಸಾಮಾಜಿಕ ಕಾರ್ಯಕ್ಕೆ ಶ್ಲಾಘನೀಯ ಎಂದರು.
ಎಂ. ಬಿ. ಪೌಂಡೇಶನ್ ಸುಳ್ಯ ಇದರ ಅಧ್ಯಕ್ಷರು ಎಂ. ಬಿ. ಸದಾಶಿವ ಮಾತನಾಡಿ, ಮಕ್ಕಳಿಗೆ ಸಂಸ್ಥಾರಯುತ ಶಿಕ್ಷಣ ನೀಡಬೇಕು. ಡಿಜಿಟಲ್ ಯುಗದಲ್ಲಿ ನಾವು ಶೈಕ್ಷಣಿಕ,ಸಾಮಾಜಿಕ ಬದಲಾವಣೆಗಳನ್ನು ಕಾಣಬೇಕು ಎಂದು ಹೇಳಿದರು
ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರು, ಸಂಜೀವ ಮಠಂದೂರು, ಜಿಲ್ಲಾ ಗೌಡರ ಯಾನೆ ಒಕ್ಕಲಿಗರ ಮಾತೃಸಂಘದ ಅಧ್ಯಕ್ಷರು ಲೋಕಯ್ಯ ಗೌಡ ಕಾರ್ಯಕ್ರಮದಲ್ಲಿ ಮಾತಾಡಿದರು.
ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ ನಡೆಯಿತು.ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷರು ಸಿ. ಕುಶಾಲಪ್ಪ ಗೌಡ ಅವರು ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು ನಿರ್ದೇಶಕರು ಡಾ| ರೇಣುಕಾ ಪ್ರಸಾದ್ ಕುರುಂಜಿ, ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಗೌರವ ಅಧ್ಯಕ್ಷರು ಗಿರಿಯಪ್ಪ ಗೌಡ ಶಾಂತಿಲ,ವಿಟ್ಲ ಮಹಿಳಾ ಘಟಕದ ಅಧ್ಯಕ್ಷರು ಅಮಿತಾಕೃಷ್ಣ ಕುಡಿಪ್ಪಾಡಿ ಗುತ್ತು, ಯುವ ವೇದಿಕೆ ವಿಟ್ಲ ಇದರ ಅಧ್ಯಕ್ಷರು ದಿನೇಶ್ ಗೌಡ ಮಾಡ್ತೇಲು, ಸಂಘದ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮಾತೃ ಸಂಘ, ಮಹಿಳಾ ಘಟಕ ಮತ್ತು ಯುವ ವೇದಿಕೆಯ ಸರ್ವಸದಸ್ಯರು ಉಪಸ್ಥಿತರಿದ್ದರು. ವಿಶ್ವನಾಥ ಕುಳಾಲು ಸ್ವಾಗತಿಸಿದರು. ಅಮಿತಾ ಕೃಷ್ಣ ಅವರಿಂದ ದನ್ಯವಾದ, ಜಲಜಾಕ್ಷಿ, ಯತೀಶ್ ಪಾದೆ ಅವರು ನಿರ್ವಾಹಣೆ ಮಾಡಿದರು.