ಕಾಸರಗೋಡು, ಡಿ. 30 : ನದಿಯಲ್ಲಿ ಸ್ನಾನಕ್ಕಿಳಿದ ಮೂವರು ಬಾಲಕರು ಮುಳುಗಿ ಸಾವನ್ನಪ್ಪಿದ ಘಟನೆ ಡಿ. 28,ಶನಿವಾರ ಬೋವಿಕ್ಕಾನ ಸಮೀಪದ ಎರಿ೦ಞಪುಯದಲ್ಲಿ ನಡೆದಿದೆ.
ಸಿದ್ದಿಕ್ ರವರ ಪುತ್ರ ರಿಯಾಜ್ (16), ಅಶ್ರಫ್ ರವರ ಪುತ್ರ ಯಾಸಿನ್ (13) ಮತ್ತು ಮಜೀದ್ ರವರ ಪುತ್ರ ಸಮದ್ (13) ಮೃತರು.
ಬೋವಿಕ್ಕಾನ ಸಮೀಪದ ಎರಿ೦ಞಪುಯದಲ್ಲಿ ಶನಿವಾರ ಮಧ್ಯಾಹ್ನ ಮೂವರು ಬಾಲಕರು ತಮ್ಮ ಮನೆಯ ಸಮೀಪ ಇರುವ ಪಯಸ್ವಿನಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದರು . ಈ ಸಂದರ್ಭದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.