ಮಂಗಳೂರು, ಡಿ. 3: ನಗರದ ಪುರಭವನದಲ್ಲಿ ದ.ಕ. ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ ಮಂಗಳೂರು ಇದರ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಡಿ.29,ರವಿವಾರ ನಡೆಯಿತು.
ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಸಮಾರಂಭವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು,ಗಾಣಿಗ ಸಮಾಜ ಸರಳ ವಿವಾಹದ ಪರಂಪರೆಯನ್ನು ಇಂದಿಗೂ ಮುಂದುವರಿಸಿಕೊಂಡು ಇಡೀ ಜಗತ್ತಿಗೆ ಉತ್ತಮ ಸಂದೇಶ ನೀಡಿದೆ. ಗಾಣಿಗ ಸಮುದಾಯದಲ್ಲಿರುವ ಕಡು ಬಡವರಿಗೆ ಸಹಾಯ,ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಸಹಕರಿಸುವುದು ಮೊದಲಾದ ಉದ್ದೇಶಗಳೊಂದಿಗೆ ರಚನೆಯಾಗಿರುವ ಸಮಾಜ ಸೇವಾ ಸಂಘದಿಂದ ಇನ್ನಷ್ಟು ಉತ್ತಮ ಕಾರ್ಯಗಳು ಆಗಲಿ ಎಂದರು.
ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ। ಭರತ್ ಶೆಟ್ಟಿ ವೈ, ಮಾತನಾಡಿ ಗಾಣಿಗ ಸಮಾಜಕ್ಕೆ ಜಿಲ್ಲಾ ಮಟ್ಟದ ಸಂಘದ ಅಗತ್ಯವಿತ್ತು. ಅದು ಈಗ ಸಾಕಾರಗೊಂಡಿರುವುದು ಸಂತಸದ ವಿಚಾರ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿದರು. ದ.ಕ. ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ರಾಮ ಮುಗೋಡಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ರಾಜಶೇಖರ್, ಕಾಸರಗೋಡು ಉದ್ಯಮಿ ಸುರೇಶ್ ಬಟ್ಟಂಪಾರ, ಪೊಲೀಸ್ ನಿರೀಕ್ಷಕ ಪ್ರಕಾಶ್ ಕೆ, ಸಿ ಸಾಫ್ಟ್ವೇರ್ ನಿರ್ದೇಶಕ ಪ್ರೀತಂ ಕೆ.ಎಸ್., ನಿವೃತ್ತ ಮುಖ್ಯೋಪಾಧ್ಯಾಯಿನಿ ಶಂಕರಿ ಪಟ್ಟೆ ನಿವೃತ್ತ ಉಪನ್ಯಾಸಕಿ ಸುಕನ್ಯಾ ದೇಲಂತಬೆಟ್ಟು, ಪ್ರಧಾನ ಕಾರ್ಯದರ್ಶಿ ಮಹಾಲಿಂಗನ್ ಬಾಜರ್ತೊಟ್ಟಿ , ಸಂಘದ ಗೌರವಾಧ್ಯಕ್ಷ ಎಸ್. ಶಂಕರ ಪಾಟಾಳಿ ಮುಕ್ರಂಪಾಡಿ, ಉಪಾಧ್ಯಕ್ಷೆ ಶಾರದಾ ಕೃಷ್ಣ, ದಾಮೋದರ ಪಾಟಾಳಿ ಪುತ್ತೂರು, ಕಿರುತೆರೆ ನಟ ಕೌಶಿಕ್ ರಾಮ್ ಉಪಸ್ಥಿತರಿದ್ದರು.
ಕರ್ನಲ್ ಬಾಲಕೃಷ್ಣ ,ಗಿರಿಜಾ ಪಟ್ಟೆ ಬಣ್ಣದ ಸುಬ್ರಾಯ, ನಾರಾಯಣ ಪಾಟಾಳಿ, ಜಯರಾಮ್ ಪಡುಮಲೆ, ಗೋಪಾಲಕೃಷ್ಣ ಈಶ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.