ಉಡುಪಿ, ಜ.11 : ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ-ಸ್ಕೂಟರ್ ಅಪಘಾತ ಸಂಭವಿಸಿ, ಗೂಡ್ಸ್ ಲಾರಿ ಮತ್ತು ಸ್ಕೂಟರ್ ಸಂಪೂರ್ಣ ಹೊತ್ತಿ ಉರಿದ ಘಟನೆ ಉಡುಪಿ ಉದ್ಯಾವರದ ಬಲಾಯಿಪಾದೆ ಎಂಬಲ್ಲಿ ನಡೆದಿದೆ.
ಮೃತರನ್ನು ಬೈಕ್ ಸವಾರ ಕೊರಂಗ್ರಪಾಡಿ ನಿವಾಸಿ ಅವಿನಾಶ್ ಆಚಾರ್ಯ( 19) ಎಂದು ಗುರುತಿಸಲಾಗಿದೆ.
ತಡರಾತ್ರಿ 2 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ-ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಬೆಂಕಿ ಹೊತ್ತಿಕೊಂಡಿದ್ದು, ಲಾರಿ ಮತ್ತು ಸ್ಕೂಟರ್ ಸುಟ್ಟು ಕರಕಲಾಗಿದೆ. ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಉಡುಪಿ ಸಂಚಾರ ಪೋಲೀಸರು ಆಗಮಿಸಿ ಪರಿಶೀಲ ನಡೆಸಿದ್ದಾರೆ.