ಮಂಗಳೂರು, ಜ.22: ನೀರುಮಾರ್ಗ ಉಳಬೈಲ್ ಮುಹಿಯುದ್ದೀನ್ ಜುಮಾ ಮಸೀದಿಯ ವತಿಯಿಂದ ಹಯಾತುಲ್ ಔಲಿಯಾ ಹೆಸರಿನಲ್ಲಿ ನಡೆಸುತ್ತ ಬಂದಿರುವಉರೂಸ್ ಕಾರ್ಯಕ್ರಮ ಜ.26ರಂದು ನಡೆಯಲಿದೆ. ಉರೂಸ್ ಅಂಗವಾಗಿ ಜ.24 ಮತ್ತು 25ರಂದು ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಜ.24ರಂದು ಸೈಯದ್ ನಿಝಾಮುದ್ದೀನ್ ಬಾಫಖಿ ತಂಬಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಮದ್ರಸದ ಅಧ್ಯಕ್ಷ ಆಸಿಫ್ ತಾರಿಗುಡ್ಡೆ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜನವರಿ 26 ರಂದು ಉರೂಸ್ ಕಾರ್ಯಕ್ರಮ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮ ಜರುಗಲಿದೆ. ಸ್ವಾಬಿರಿಯ್ಯ ಅರೆಬಿಕ್ ಕಾಲೇಜು ಕಲಿಯಾರ್ ಪ್ರಾಂಶುಪಾಲರಾದ ಅಲ್ ಹಾಝ್ ಅಬ್ದುಲ್ ರಝಾಕ್ ಮಿಸ್ಸಾಹಿ ಬಾಯಾರ್ ನೇತೃತ್ವ ವಹಿಸಲಿದ್ದು, ಅಬ್ದುಲ್ ಅಝೀಝ್ ಇರ್ಫಾನಿ ಮಖೂಮಿ ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಫರೀದ್, ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಾದ ಬಿ.ಝಡ್ ಜಮೀರ್ ಅಹಮದ್, ಕಾರ್ಮಿಕ ಇಲಾಖೆ ಸಚಿವರಾದ ಸಂತೋಷ್ ಲಾಡ್, ಮಂಗಳೂರು ಉತ್ತರ ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಕ್ಸ್ ಮಂಡಳಿ ಮಾಜಿ ಅಧ್ಯಕ್ಷರಾದ ಎನ್.ಕೆ.ಎಂ ಶಾಫಿ ಸಅದಿ, ಮಾಜಿ ಶಾಸಕರಾದ ಮೊಹಿದ್ದೀನ್ ಬಾವಾ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ,ಜಿ.ಎ ಬಾವಾ, ಯಾಕೂಬ್ ಹೊಸನಗರ, ಅನ್ವರ್ ಭಾಷಾ,ವಕ್ಸ್ ಸಲಹಾ ಸಮಿತಿ ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ಉಪಾಧ್ಯಕ್ಷರಾದ ಫಕೀರಬ್ಬ ಮಾಸ್ಟರ್, ಅಬ್ದುಲ್ ಲತೀಫ್ ಗುರುಪುರ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ. ದ.ಕ ಜಿಲ್ಲಾ ವಕ್ಸ್ ಸಲಹಾ ಸಮಿತಿ ಸದಸ್ಯರಾದ ಮುಹಮ್ಮದ್ ಹನೀಫ್ ಮಲ್ಲೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಥಳೀಯ ಜಮಾಅತ್ ಪ್ರಮುಖರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಸೀದಿ ಖತೀಬ್ ಫಯಾಝ್ ಅಲಿ ರು, ಮುಹಮ್ಮದ್ ಹನೀಫ್ ಮಲ್ಲೂರು, ಸಮೀರ್, ಹಮೀದ್, ರಫೀಕ್ ಉಳಬೈಲ್ ಉಪಸ್ಥಿತರಿದ್ದರು.