ಮಂಗಳೂರು ಜ.26 : ನಗದದ ಸುಲ್ತಾನ್ ಬತ್ತೇರಿಯಲ್ಲಿರುವ ಸ್ವಸ್ತಿಕ್ ವಾಟರ್ ಪ್ರಂಟ್ ನಲ್ಲಿ ಜೆಸಿಐ ಮಂಗಳೂರು ಸಾಮ್ರಾಟ್ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ನಡೆಯಿತು.
ಸಮಾರಂಭದಲ್ಲಿ ಅತಿಥಿಯಾಗಿದ್ದ ನಗರ ಪೊಲೀಸ್ ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಮಾತಾನಾಡಿ, ಜೆಸಿಐ ಸಂಸ್ಥೆಯಿಂದ ನಡೆಯುತ್ತಿರುವ ಸಾಮಾಜಿಕ ಸೇವಾ ಕಾರ್ಯಕ್ಕೆ ಶ್ಲಾಘನೀಯ ಎಂದು ಹೇಳಿದರು.
ನೂತನ ಅಧ್ಯಕ್ಷ ಯತೀಶ್ ಕೆ.ಎಸ್., ಮಾತಾನಾಡಿ, ಜೆಸಿಐ ಸಂಸ್ಥೆ ನನಗೆ ಸಮಾಜ ಸೇವೆ, ಶಿಸ್ತು ಸೇರಿ ಬಹಳಷ್ಟು ಕಳಿಸಿದೆ ಮತ್ತು ನನ್ನ ಜೀವನಕ್ಕೆ ಸ್ಪೂರ್ತಿಯಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಜೆಸಿಐ ಮಂಗಳೂರು ಸಾಮ್ರಾಟ್ ಸ್ಥಾಪಕ ಅಧ್ಯಕ್ಷ ಡಾ.ರಾಘವೇಂದ್ರ ಹೊಳ್ಳ, ನೂತನ ಅಧ್ಯಕ್ಷ ಯತೀಶ್ ಕೆ.ಎಸ್., ನಿಕಟಪೂರ್ವ ಅಧ್ಯಕ್ಷೆ ದೀಪಾ ರಾವ್, ನಿಯೋಜಿತ ಕಾರ್ಯದರ್ಶಿ ಭೂಮಿಕಾ ಪೂಜಾರಿ, ಅಲ್ವಿನ್ ಸಿಕ್ವೆರ ಮತ್ತಿತ್ತರರು ಉಪಸ್ಥಿತರಿದ್ದರು.ಸಭೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.