ಮಂಗಳೂರು: ಜ.30; ಮುಲುಂಡ್ ಕ್ರಿಯೇಶನ್ಸ್ ನ ನಾಗರಾಜ್ ಎಸ್. ಮುಳಗುಂದ ನಿರ್ಮಾಣದ ಒಲವಿನ ಪಯಣ ಚಿತ್ರ ಫೆ.21ರಂದು ಬಿಡುಗಡೆ ಗೊಳ್ಳಲಿದೆ ಎಂದು ನಿರ್ದೇಶಕ ಕಿಶನ್ ಬಲಾಡ್ ಮಂಗಳವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಚಿತ್ರದ ನಾಯಕ ನಟನಾಗಿ ಸುನೀಲ್, ನಟಿಯಾಗಿ ಪ್ರಿಯ ಹೆಗ್ಡೆ, ಖುಶಿ ಅಭಿನಯಿಸಿದ್ದಾರೆ. ಜೀವನ್ ಗೌಡ ಛಾಯಾಗ್ರಹಕರಾಗಿ, ಕೀರ್ತಿರಾಜ್ ಸಂಕ ಲನ, ಗುರುಪ್ರಸಾದ್ ಕಲರಿಸ್ಟ್, ನವೀನ್ ಎಸ್ ಎಫ್ ಎಕ್ಸ್ ಸಾಯಿ ಸರ್ವೇಶ್ ಸಂಗೀತ, ಪೋಷಕ ಕಲಾವಿದರಾಗಿ ಪದ್ಮಜಾ ರಾವ್, ಬಲ ರಾಜ್ವಾಡಿ, ನಾಗೇಶ್ ಮಯ್ಯ, ಪೃಥ್ವಿರಾಜ್, ಸುಧಾ ಕರ ಬನ್ನಂಜೆ, ಸೂರ್ಯಕಿರಣ್ ಧನಂಜತ್, ಸಮೀಕ್ಷಾ, ಬೇಬಿ ರಿಧಿ ಅಭಿನಯಿಸಿದ್ದಾರೆ. ಒಲವಿನ ಪಯಣ ಇದೊಂದು ಹಳ್ಳಿಯ ಮಧ್ಯಮ ವರ್ಗದ ಕುಟುಂಬದ ಯುವಕನ ಬದುಕಿನ ಪಯಣದ ಕಥೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕರಾದ ನಾಗರಾಜ್ ಮುಳಗುಂದ, ನಟರಾದ ಸುನೀಲ್, ನಟಿ ಯರಾದ ಕುಶಿ, ಪ್ರಿಯ ಹೆಗ್ಡೆ, ಕಲಾವಿದ ನಾಗೇಶ್ ಮಯ್ಯ ಉಪಸ್ಥಿತರಿದ್ದರು