ಮಂಗಳೂರು,ಜ.31: ಅಳಕೆ ಶ್ರೀ ನಾಗಬ್ರಹ್ಮ ದೇವಸ್ಥಾನ ಮತ್ತು ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ ಮತ್ತು ಅಳಕೆ ಶ್ರೀ ನಾಗಬ್ರಹ್ಮ ಸೇವಾ ಟ್ರಸ್ಟ್ (ರಿ.) ಇದರ ಸಹಯೋಗದಲ್ಲಿ ಜ. 30 ರಿಂದ ಫೆ. 01 ತನಕ ಅಳಕೆ ಶ್ರೀ ನಾಗಬ್ರಹ್ಮದೇವರ ಮತ್ತು ಕಲ್ಲುರ್ಟಿ ಪಂಜುರ್ಲಿ ದೈವಗಳ ವಾರ್ಷಿಕ ಜಾತ್ರಾ ಮಹೋತ್ಸವವು ಜರಗಲಿದೆ.
ಈ ಪ್ರಯುಕ್ತ ಜ. 30 ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ,ಮಧ್ಯಾಹ್ನ ಮಹಾಪೂಜೆ, ಸಂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಕಲಶ ಪ್ರತಿಷ್ಠೆ, ಶ್ರೀ ನಾಗಬ್ರಹ್ಮ ದೇವಸ್ಥಾನದ ಪರಿಸರದ ಮಕ್ಕಳಿಂದ ಭಕ್ತಿ ಹಾಗೂ ಜಾನಪದ ನೃತ್ಯ, ರಾತ್ರಿ ಶ್ರೀ ಸತ್ಯನಾರಾಯಣ ಪೂಜೆಯ ಮಂಗಳಾರತಿ, ಮಹಾಪೂಜೆ ನಡೆಯಿತು. ಜ. 31 ರಂದು ಬೆಳಿಗ್ಗೆ ಪೂಜೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ರಾತ್ರಿ ಶ್ರೀ ನಾಗಬ್ರಹ್ಮ ದೇವರಿಗೆ ವಿಶೇಷ ಹೂವಿನ ಪೂಜೆ, ಮಹಾಪೂಜೆ ನಡೆಯಿತು.
ಜ. 01 ಶನಿವಾರ ಬೆಳಿಗ್ಗೆ ಪೂಜೆ, ನಾಗಬನದಲ್ಲಿ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಪಂಚಗವ್ಯ, ಪಂಚಾಮೃತಾಭಿಷೇಕ, ಮಧ್ಯಾಹ್ನ ಮಹಾಪೂಜೆ ಮತ್ತು ನಾಗದರ್ಶನ, ಸಂಜೆ ಭಜನೆ, ಸಾರ್ವಜನಿಕ ಹೂವಿನ ಪೂಜೆ, ರಾತ್ರಿ ಮಹಾಪೂಜೆ, ಕಲ್ಲುರ್ಟಿ ಪಂಜುರ್ಲಿ ದೈವಗಳ ನೇಮೋತ್ಸವ ಜರಗಲಿರುವುದು.