ವಿಟ್ಟ ಫೆ. 7 : ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ಒಡಿಯೂರು ರಥೋತ್ಸವ, ತುಳುನಾಡ ಜಾತ್ರೆ ಹಾಗೂ ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರ ಲೋಕಾರ್ಪಣೆ ಕಾರ್ಯಕ್ರಮ ಫೆ. 6ರಂದು ಸಂಸ್ಥಾನದ ಅವರಣದಲ್ಲಿ ಜರಗಿತು.
ಈ ಪ್ರಯುಕ್ತ ನಡೆದ ತುಳು ಸಾಹಿತ್ಯ ಸಮ್ಮೇಳನವನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಉದ್ಘಾಟಿಸಿದರು.
ನಂತರ ಮಾತಾಡಿದ ಅವರು ತುಳು ಭಾಷೆಗೆ ಮಾನ್ಯತೆ ಸಿಗಲು ತುಳುವರು ಒಗ್ಗಟ್ಟಾಗಿ ಹೋರಾಡಬೇಕು. ಆಂಗ್ಲ ಸಹಿತ ಎಲ್ಲ ಭಾಷೆಗಳ ಮೇಲೆ ಗೌರವ ಇರಲಿ, ಆದರೆ ತುಳುವರು ತುಳು ಭಾಷೆಯನ್ನು ಮರೆಯಬಾರದು ಎಂದು ಹೇಳಿದರು.
ಲೇಖಕ ಭಾಸ್ಕರ ರೈ ಕುಕ್ಕುವಳ್ಳಿ ಅಧ್ಯಕ್ಷತೆ ವಹಿಸಿ, ಮಾತಾಡಿದ ಅವರು, ಯುವಜನರು ಕೃಷಿ ತ್ಯಜಿಸಿ ಪೇಟೆಗೆ ಅಥವಾ ವಿದೇಶಕ್ಕೆ ತೆರಳುತ್ತಿರುವುದು ಬೇಸರದ ಸಂಗತಿಯಾಗಿದೆ. ತುಳುವರು ತುಳು ಭಾಷೆಯಲ್ಲಿ ಮಾತಾಡಿ ತುಳು ಭಾಷೆಯನ್ನು ಪ್ರೋತ್ಸಾಹಿಸಿ ಎಂದರು.
ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಡಾ| ವಸಂತ ಕುಮಾರ್ ಪರ್ಲ, ತುಳುನಾಡ ರಕ್ಷಣ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ತುಳು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಡುಪಿ ಎಂ.ಜಿ.ಎಂ.ಕಾಲೇಜಿನ ಪ್ರಾದೇಶಿಕ ಸಂಶೋಧನೆ ಕೇಂದ್ರದ ಸಂಶೋಧಕ ಡಾ| ಎಸ್. ಆರ್., ಅರುಣ್ ಕುಮಾರ್ ಅವರು ‘ತುಳುನಾಡ ಸಂತ ಪರಂಪರೆ, ಗುರುವಾಯನಕೆರೆ ಎಕ್ಸೆಲ್ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಾ| ನವೀನ್ ಕುಮಾರ್ ಮರಿಕ ಅವರು ‘ತುಳುನಾಡ ಜಾನಪದ ಪರಂಪರೆ’, ಗುಂಡ್ಯಡ್ನಮಲ್ಲಿಕಾಜೆ. ರೈ ಅವರು ‘ತುಳುನಾಡ್ಡ ಸಾಹಿತ್ಯ ಪರಂಪರೆ’ ವಿಷಯಗಳಲ್ಲಿ ಮಾತನಾಡಿದರು.
ಸ್ವಾಮೀಜಿ ತುಳುಲಿಪಿಯಲ್ಲಿ ಬರೆದ ಶ್ರೀಮದ್ಭಗವದ್ಗೀತೆ ಮತ್ತು ಡಾ| ವಸಂತ ಕುಮಾ ಪೆರ್ಲರ ‘ಮಾಯಿಪ್ಪಾಡಿ ವೀರ ಪುಳ್ಳೂರ ಬಾಚೆ’ ತುಳು ಕೃತಿಗಳು ಬಿಡುಗಡೆಗೊಂಡವು.
ಈ ಸಂದರ್ಭದಲ್ಲಿ ಪಾಡ್ಡನ ಕಲಾವಿದೆ ಅಳದಂಗಡಿ ಕರ್ಗಿ ಶೆಡ್ತಿ, ತುಳು ಕನ್ನಡ ಸಿನೆಮಾ ನಿರ್ಮಾಪಕ ಮಲಾರುಬೀಡು ಪುಷ್ಪರಾಜ ರೈ, ಸಮಾಜ ಸೇವಕ ಮಾಡ ಹರೀಶ್ ಶೆಟ್ಟಿ ಸಾವಯವ ಕೃಷಿಕ ಕೇಪು ಕೃಷ್ಣಪ್ಪ ಪುರುಷ, ಆರಕ್ಷಕ ಸೇವೆಯ ನಡುಕೂಟೇಲು ಪ್ರವೀಣ್ ರೈ ಹಾಗೂ ಕೃಷಿ ಕ್ಷೇತ್ರದ ಎಡಮಂಗಲ ಸೀತಮ್ಮ ಹಾಲೇಶ್ ಗೌಡ ಅವರನ್ನು ತುಳು ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು,
ನಿತ್ಯಶ್ರೀ ರೈ ಆಶಯಗೀತೆ ಹಾಡಿದರು. ರಥೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ತುಳುಸಿರಿ ಪುರಸ್ಕೃತರನ್ನು ಪರಿಚಯಿಸಿದರು. ದೇವಿಪ್ರಸಾದ ಶೆಟ್ಟಿ ಬೆಜ್ಜ ನಿರೂಪಿಸಿದರು. ಗ್ರಾಮವಿಕಾಸ ಯೋಜನೆಯ ಪಿಆರ್ಒ ಮಾತೇಶ್ ಭಂಡಾರಿ ವಂದಿಸಿದರು.ನಂತರ ಯಕ್ಷಗಾನ ಪ್ರದರ್ಶನಗೊಂಡಿತು