ಜಪ್ಪಿನಮೊಗರು, ಫೆ. 9 : ಜಯ್ – ವಿಜಯ್ ಜೋಡುಕರೆ ಕಂಬಳ ಸಮಿತಿ ವತಿಯಿಂದ ಕೀರ್ತಿಶೇಷ ಜೆ.ಜಯಗಂಗಾಧರ ಶೆಟ್ಟಿ ಮಗ್ಗುತೋಟಗುತ್ತು ಹಾಗೂ ನಾಡಾಜೆ ಗುತ್ತು ಸ್ಮರಣಾರ್ಥ 15ನೇ ವರ್ಷದ ಹೊನಲು ಬೆಳಕಿನ ಜಯ – ವಿಜಯ ಜೋಡುಕರೆ ಕಂಬಳಕ್ಕೆ ಜಪ್ಪಿನಮೊಗರು ನೇತ್ರಾವತಿ ತೀರದಲ್ಲಿ ಶನಿವಾರ ಚಾಲನೆ ದೊರೆಯಿತು.
ವೇ। ಮೂ। ಬ್ರಹ್ಮಶ್ರೀ ವಿಟ್ಠಲದಾಸ ತಂತ್ರಿ ದೇರೆಬೈಲು ಅವರು ಕಂಬಳ ಉದ್ಘಾಟಿಸಿದರು. ಕಂಬಳ, ಸಮಿತಿ ಗೌರವಾಧ್ಯಕ್ಷ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ರಾಜ್ಯ ಸರಕಾರದ 5 ಲಕ್ಷ ರೂ. ಮಾತ್ರವಲ್ಲದೆ, ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ಕಂಬಳಕ್ಕೆ ಪಾಲಿಕೆಯಿಂದ ಆರ್ಥಿಕ ನೆರವು ನೀಡಲಾಗುತ್ತಿದೆ.ಜಾನಪದ ಕ್ರೀಡೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಕಂರ್ಭಿಸ್ಥಾನ ಶ್ರೀ ವೈದ್ಯನಾಥ ದೈವಸ್ಥಾನ ಆಡಳಿತ ಮೊಕ್ತಸರ ಜೆ, ಅನಿಲ್ ಶೆಟ್ಟಿ ಮನುತೋಟಗುತ್ತು, ಪ್ರಮುಖರಾದ ಮಂಜುನಾಥ ಭಂಡಾರಿ ಮೂಡುಶೆಡ್ಡೆ ಜಪ್ಪುಗುಡ್ಡೆ ಗುತ್ತು ಭುಜಂಗ ಶೆಟ್ಟಿ, ಗಣೇಶ್ ಶೆಟ್ಟಿ ಜಪುಗುಡ್ಡೆ ಗುತ್ತು, ಹರೀಶ್ಚಂದ್ರ ಆಳ್ವ ಕೊಡೆತ್ತೂರು ಗುತ್ತು ದೇವಸ್ಯ, ಧರ್ಮದರ್ಶಿ ದಯಾನಂದ, ತೇಜಾಕ್ಷಸುವರ್ಣ ನಟ್ಟಿಮನೆ, ಚಿತ್ತರಂಜನ್ ಬೋಳಾರ್, ವಸಂತ ಶೆಟ್ಟಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿ.ರಾಮಚಂದ್ರ ಆಳ್ವ , ಪೊಲೀಸ್ ಅಧಿಕಾರಿ ಟಿ.ಡಿ.ನಾಗರಾಜ್, ಮನಪಾ ಸದಸ್ಯರಾದ ವೀಣಾ ಮಂಗಳಾ, ಟಿ. ಪ್ರವೀಣ್ ಚಂದ್ರ ಆಳ್ವ, ಶಿವಕುಮಾರ್, ಸುಬ್ಬಯ್ಯ ಭಂಡಾರಿ, ಯಶೋಧರ ಚೌಟ ಎಕ್ಕೂರು, ಮಹಾಬಲ ಶೆಟ್ಟಿ ನಿಡೋಡಿ, ಶಿವಾನಂದ ರಾವ್ ಕಡೆಕಾರು, ಜಯಂತ ಕೋಟ್ಯಾನ್, ಭಾಸ್ಕರಚಂದ್ರ ಶೆಟ್ಟಿ, ಗಣೇಶ್ ಶೆಟ್ಟಿ ಕಂರ್ಭಿಕರೆ, ಸಂತೋಷ್ ಶೆಟ್ಟಿ ಪ್ರಕಾಶ್ ಶೆಟ್ಟಿ ಬೈಲು ಕಂದಾವರಗುತ್ತು, ರವಿರಾಜ್ ಶೆಟ್ಟಿ ಕಡೆಕಾರು, ಪ್ರೊ| ಶಾಂತಾರಾಮ ರೈ ಉಪಸ್ಥಿತರಿದ್ದರು.