ಮಂಗಳೂರು,ಫೆ. 9 : ಬಲ್ಯಾಯ ಯಾನೆ ಕಣಿಶನ್ ಮಹಾಜನ ಸಂಘ ಮತ್ತು ಯುವವೇದಿಕೆ ಹಾಗೂ ಮಹಿಳಾವೇದಿಕೆ ಸಹಯೋಗದೊಂದಿಗೆ 70ನೇ ವರ್ಷದ ಸವಿನೆನಪಿನ ಸಮುದಾಯ ಸಂಭ್ರಮ 2025 ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಫೆ. 9 ಭಾನುವಾರ ಜರಗಿತು.
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದ ಅತಿಥಿ ಮಂಗಳೂರು ಮಹಾನಗರಪಾಲಿಕೆಯ ನಗರ ಯೋಜನಾಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷರು ವೀಣಾ ಮಂಗಳ ಅವರು ಮಾತಾನಾಡಿ ಬಲ್ಯಾಯ ಯಾನೆ ಕಣಿಶನ್ ಮಹಾಜನ ಸಂಘದಿಂದ ನಡೆಯುವ ಸೇವಾ ಕಾರ್ಯಕ್ಕೆ ಶ್ಲಾಘನೀಯ. ಈ ಸಂಘದ ಮೂಲಕ ಇನ್ನೂ ಹೆಚ್ಚು ಸಾಮಾಜಿಕ ಸೇವಾ ಕಾರ್ಯಗಳು ನಡೆಯಲಿ ಎಂದರು.
ಮಂಗಳೂರು ಹಸಿರು ದಳ ಇದರ ಸಂಚಾಲಕರು ನಾಗರಾಜ್ ಬಜಾಲ್ ಮಾತಾನಾಡಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವುದರಿಂದ ಸ್ವಚ್ಚ ಮತ್ತು ಸ್ವಸ್ತ ಸಮಾಜ ನಿರ್ಮಾಣ ಸಾದ್ಯ ಎಂದರು.
ಕಾಸರಗೋಡು ಕೇರಳ ರಾಜ್ಯ ಸರಕು ಮತ್ತು ಸೇವಾ ತೆರಿಗೆ ಅಸ್ಟೆಂಟ್ ಕಮಿಷನರ್ ರಾಜೇಂದ್ರ ಕುಂಟಾರು ಮಾತಾನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಬಲ್ಯಾಯ ಯಾನೆ ಕಣಿಶನ್ ಮಹಾಜನ ಸಂಘದ ಅಧ್ಯಕ್ಷರು ಉಮಾಲಕ್ಷ್ಮಿ ಕುಡುಪು ಅವರು ಅಧ್ಯಕ್ಷೀಯ ಭಾಷಣ ಮಾಡಿದರು.
ಬೆಂಗಳೂರು ಆರ್ ಎಂಡ್ ಡಿ ಎಡಿಎ ಡಿಪೆನ್ಸ್ ಇಂಜಿನೀಯರ್ ಸತೀಶ್ ಶೆಟ್ಟಿ ಕೆ., ಸಮಾಜ ಸೇವಕರು ಸತೀಶ್ ಬಲ್ಯಾಯ ಸವಣೂರು ಮತ್ತು ತುಳು ಚಲನಚಿತ್ರ ನಟ ವಿನಿತ್ ಕುಮಾರ್ ಕಾರ್ಯಕ್ರಮದಲ್ಲಿ ಮಾತಾನಾಡಿದರು. ಮಂಗಳೂರು ಬಲ್ಯಾಯ ಯಾನೆ ಕಣಿಶನ್ ಮಹಾಜನ ಸಂಘದ ಗೌರವಾಧ್ಯಕ್ಷರು ಅರುಣ್ ಕುಮಾರ್ ಪಿ.ವಿ. ಪ್ರಾಸ್ತಾವಣೆಗೈದರು.
ಈ ಸಂದರ್ಭದಲ್ಲಿ ಪದ್ಮನಾಭ ಜೋಶಿ ಪೆರ್ಮಂಕಿ (ಸಂಘ ಸೇವೆ),ಪುರಂದರ ಬಲ್ಯಾಯ ಪುದು (ಸಂಘ ಸೇವೆ),ಬಾಲಕೃಷ್ಣ ಕುಮ್ಡೇಲು (ಸಂಘ ಸೇವೆ), ಅಂಬಿಕ ರಮೇಶ್ ಎಂ.ಕೆ., ಜ್ಯೋತಿಷ್ಯರು, ಪುತ್ತೂರು (ನವ ಉದ್ಯಮಿ), ರಾಧಾಕೃಷ್ಣ ಬಲ್ಯಾಯ ಸಾಮಣಿಗೆ (ಸಂಘ ಸೇವೆ), ನಾಗರಾಜ ಪಂಡಿತ್ ಕಲ್ಲಡ್ಕ (ಕಲಾ ಪೋಷಕರು), ನವೀನ್ ಅಡ್ಯಾರ್ (ಕಲಾಕ್ಷೇತ್ರ)ಪ್ರಜ್ವಲ್ ಬಲ್ಯಾಯ ಕಪಿತಾನಿಯೊ (ಮಾಧ್ಯಮ ಕ್ಷೇತ್ರ) ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ, ಪೂಕಳಂ ರಂಗೋಲಿ ವಿಜೇತರಿಗೆ ಬಹುಮಾನ ವಿತರಣೆ, ವಿದ್ಯಾರ್ಥಿವೇತನ ವಿತರಣೆ, ಯುವಪ್ರತಿಭೆಗಳಿಗೆ ಅಭಿನಂದನೆ, ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬಲ್ಯಾಯ ಯಾನೆ ಕಣಿಶನ್ ಮಹಾಜನ ಸಂಘದ ಉಪಾಧ್ಯಕ್ಷರು ವಿ. ನಾಗರಾಜ್ ಪಂಡಿತ್ ವಾಮಂಜೂರು, ಸುರೇಶ್ ಕುಮಾರ್, ಎಂ., ಜಯಪ್ರಕಾಶ್ ಪಂಡಿತ್ ಬಬ್ಬುಕಟ್ಟೆ, ಗಣೇಶ್ ಪಂಡಿತ್ ಬಜಾಲ್, ವಕ್ತಾರರು ರಾಜ ಬಲ್ಯಾಯ್ ಕಲ್ಲಡ್ಕ, ಕಾರ್ಯದರ್ಶಿ ಸುಬ್ರಹ್ಮಣ್ಯ, ಕಾಸರಗೋಡು,ಕೋಶಾಧಿಕಾರಿ ಶಶಿಕಲಾ ಧನಂಜಯ, ಹೊತೆ ಕಾರ್ಯದರ್ಶಿ ಮನೋರಮಾ ಕುಡುಪು ,ರಜನಿಕಾಂತ್ ಪಂಡಿತ್ ಪಿಲಾರ್, ಹೇಮಂತ್ ಪಂಡಿತ್ ಅಳಪೆ, ಲೆಕ್ಕ ಪರಿಶೋಧಕರು ಗೀತಾಲಕ್ಷ್ಮಿ ಪುದು, ಮಹಿಳಾ ವೇದಿಕೆ ಸಂಚಾಲಕರು ಮಮತ ಗಣೇಶ್ ಬಜಾಲ್, ಯುವ ವೇದಿಕ ಸಂಚಾಲಕರು ಅರವಿಂದ್ ಪಂಡಿತ್ ಪೆರ್ಮಂಕಿ, ಯುವ ವೇದಿಕೆ ಸಹಸಂಚಾಲಕರು ಭರತ್ ರಾಜ್ ಅಸೈಗೋಳಿ, ಆಕರ್ಷ್ ಗರೋಡಿ, ಮಹಿಳಾ ಸಹ ಸಂಚಾಲಕಿ ಅರ್ಚನ ಸಂದೀಪ್ ಕುಡ್ತಡ್ಕ, ಸಂಘಟನಾ ಕಾರ್ಯದರ್ಶಿಗಳು ಭಾಸ್ಕರ ಬಲ್ಯಾಯ್ ಕರ್ಮಾರ್, ಲೋಕೇಶ್ ಬಲ್ಯಾಯ ವಿಜಯನಗರ, ಲಕ್ಷ್ಮೀ ಭಾಸ್ಕರ್ ಅಸೈಗೋಳಿ, ನವೀನ್ ಬಲ್ಯಾಯ ಅಳಪೆ, ಸಮಿತಿ ಸದಸ್ಯರುಗಳಾದ ಪ್ರಕಾಶ್ ಬಲ್ಯಾಯ ಗರೋಡಿ, ಎಸ್. ಕೃಷ್ಣ ವರ್ಕಾಡಿ, ಮಲ್ಲಿಕಾ ಭಾನುಪ್ರಕಾಶ್ , ಭಾಸ್ಕರ್ ಬಲ್ಯಾಯ ಅಳಪೆ, ರಾಜೇಶ್ ಗುತ್ತುಗುಡ್ಡೆ, ಕೃಷ್ಣಾನಂದ ಸಜಿಪ , ಚಿತ್ರಾ ಜಕ್ರಿಬೆಟ್ಟು, ಚಂದ್ರಾಡ್ಕರ್, ಪ್ರಿಯಾಂಕ ಪುಷ್ಪರಾಜ್ ಉಡುಪಿ ಉಪಸ್ಥಿತರಿದ್ದರು.