ಉರ್ವ, ಫೆ. 20 : ಬೋಳೂರು ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಹಿತ ವರ್ಷಾವಧಿ ಮಹಾಪೂಜೆ ಮಂಗಳವಾರ ಸಂಪನ್ನಗೊಂಡಿತು.
ಸೋಮವಾರ,ಫೆ. 17ರಂದು ರಾತ್ರಿ ದೇವಿಗೆ ಮಹಾರಂಗ ಪೂಜೆಯಾಗಿ ಹಾಲು ಉಕ್ಕಿಸುವ ಪೂಜೆ ನೆರವೇರಿತು. ತಡರಾತ್ರಿ ಮಹಾಪೂಜೆ ಹೊರಗಿನ ದರ್ಶನ ಬಲಿ, ಕಟ್ಟೆ ಬಲಿ, ಮಡಸ್ತಾನ, ಕಂಚಿಲ್ ಸೇವೆ, ಶ್ರೀದೇವಿಯ ಗರ್ಭಗುಡಿ ಪ್ರವೇಶವಾಯಿತು.
ಮಂಗಳವಾರ ಬೆಳಗ್ಗೆ ನಿತ್ಯಪೂಜೆ, ಮಧ್ಯಾಹ್ನ ಸರ್ವಾಲಂಕಾರ ಪೂಜೆ, ಮಹಾಪೂಜೆ, ಸಂಜೆ ಮಹಾಪೂಜೆ, ಹೊರಗಿನ ದರ್ಶನ ಬಲಿ, ಕಟ್ಟೆ ಬಲಿ, ಮಡಸ್ತಾನ, ಕಂಚಿಲ್ ಸೇವೆ, ಶ್ರೀದೇವಿಯ ಗರ್ಭಗುಡಿ ಪ್ರವೇಶವಾಯಿತು.
ರಾತ್ರಿ ಸುಡುಮದ್ದು ಪ್ರದರ್ಶನ ನೆರವೇರಿತು. ಬಳಿಕ ನೈವೇದ್ಯ ಬಲಿ, ಮಹಾರಾಶಿ ಪೂಜೆ ನಡೆಯಿತು. ಫೆಬ್ರವರಿ 22ರಂದು ರಾತ್ರಿ 7ರಿಂದ ಶ್ರೀ ಮಲರಾಯ ಧೂಮಾವತಿ ದೈವಗಳ ನೇಮ ನಡೆಯಲಿದೆ.