ಮಂಗಳೂರು, ಫೆ. 22 : ನೀರುಮಾರ್ಗದ ಪೆದಮಲೆಯಲ್ಲಿ ಪುನನಿರ್ಮಾಣಗೊಂಡಿರುವ ಶ್ರೀವಾಜಿಲ್ಲಾಯ ಮಹಿಷಂತಾಯ -ಧೂಮಾವತಿ ಬಂಟ ದೈವಸ್ಥಾನದಲ್ಲಿ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ ಫೆ. 18ರಿಂದ 22ರ ವರೆಗೆ ಕುಡುಪು ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಫೆ. 18ರಂದು ಅಪರಾಹ್ನ 3 ಗಂಟೆಗೆ ನೀರುಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನ ಮಂದಿರದಿಂದ ದೈವಸ್ಥಾನಕ್ಕೆ ಬಂಡಿ ಕೊಡಿಮರ ಮತ್ತು ದೈವಗಳ ಆಭರಣಗಳ ಶೋಭಾಯಾತ್ರೆ, ನಡೆಯಿತು. ಸಂಜೆ 5ಗಂಟೆಗೆ ಪೆದಮಲೆಗುತ್ತು ಭಂಡಾರ ಚಾವಡಿಯಲ್ಲಿ ದೇವತಾ ಪ್ರಾರ್ಥನೆ, ಶಿಲ್ಪ ಸನ್ಮಾನ, ಆಲಯ ಪ್ರತಿಗ್ರಹ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲ, ಮತ್ತು ನೂತನ ಮೊಗಮೂರ್ತಿ ಉಯ್ಯಾಲೆಗಳ ಶುದ್ಧಿ ಪ್ರಕ್ರಿಯೆ ಹಾಗೂ ಬಿಂಬಾಧಿವಾಸ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವಲ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ನಡೆಯಿತು.
ಫೆ. 19ರಂದು ಬೆಳಗ್ಗೆ ಪೆದಮಲೆಗುತ್ತು ಭಂಡಾರ ಚಾವಡಿಯಲ್ಲಿ ಗಣಪತಿ ಹೋಮ,ತುಳಸಿ ಪ್ರತಿಷ್ಠೆ ಮತ್ತು ದ್ವಾರಪೂಜೆ ಶ್ರೀ ದೈವಗಳ ಪ್ರತಿಷ್ಠೆ ಕಲಶಾಭಿಷೇಕ ಪೆದಮಲೆ ದೈವಸ್ಥಾನದಲ್ಲಿ ಗಣಪತಿ ಹೋಮ ಮತ್ತು ತೋರಣ ಮುಹೂರ್ತ,ಅನ್ನ ಸಂತರ್ಪಣೆ ಸಂಜೆ ಪೆದಮಲೆ ದೈವಸ್ಥಾನದಲ್ಲಿ ಆಲಯ ಪರಿಗ್ರಹ, ರಕ್ಷೋಘ್ನ ಹೋಮ, ವಾಸ್ತುಹೋಮ ಮತ್ತು ವಾಸ್ತುಬಲಿ ನಡೆಯಿತು. ಈ ಸಂದರ್ಭದಲ್ಲಿ ಸಭಾಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಫೆ. 20ರಂದು ದೈವಸ್ಥಾನದಲ್ಲಿ ಪ್ರಾಯಶ್ಚಿತ್ತ ಹೋಮಗಳು ಮತ್ತು ನವಗ್ರಹ ಶಾಂತಿ ಹೋಮ, ಪೆದಮಲೆಗುತ್ತು ಭಂಡಾರ ಚಾವಡಿಯಿಂದ ಪೆದಮಲೆ ದೈವಸ್ಥಾನಕ್ಕೆಶ್ರೀ ದೈವಗಳ ಭಂಡಾರ ಆಗಮನ ಮತ್ತು ಧ್ವಜಮರ ಏರಿಸುವುದು ಅನ್ನ ಸಂತರ್ಪಣೆ ಸಂಜೆ ದೈವಸ್ಥಾನದಲ್ಲಿ ಬಿಂಬಾಧಿವಾಸ, ಶ್ರೀ ವಾಜಿಲ್ಲಾಯ, ಧೂಮಾವತಿ, ಬಂಟ ಮತ್ತು ಮಹಿಷಂತಾಯ ದೈವಗಳಿಗೆ ಕಲಶ ಪೂರಣ, ಅಧಿವಾಸ ಹೋಮ ಮತ್ತು ಕಲಶಾಧಿವಾಸ ನಡೆಯಿತು. ಈ ಸಂದರ್ಭದಲ್ಲಿ ಸಭಾಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಫೆ. 21ರಂದು ಬೆಳಗ್ಗೆ ಪೆದಮಲೆಯಲ್ಲಿ ನೂತನವಾಗಿ ತೆ ನಿರ್ಮಿಸಿರುವ ದೈವಸ್ಥಾನದಲ್ಲಿ ಶ್ರೀ ವಾಜಿಲ್ಲಾಯ ಧೂಮಾವತಿ ಬಂಟ ಮಹಿಷಂತಾಯ ದೈವಗಳ ಪ್ರತಿಷ್ಠೆ ಕಲಶಾಭಿಷೇಕ ಮತ್ತು ಪ್ರಸನ್ನಪೂಜೆ, ಶ್ರೀ ಧೂಮಾವತಿ ದೈವದ ದರ್ಶನ ಸೇವೆ, ಧ್ವಜ ಆರೋಹಣ ಮತ್ತು ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮಹಿಷಂತಾಯ ದೈವದ ನೇಮ, ಶ್ರೀ ವಾಜಿಲ್ಲಾಯ ದೈವದ ಗಗ್ಗರ ಸೇವೆ, ನೇಮೋತ್ಸವ, ಬಂಡಿ ಉತ್ಸವ ಫೆ. 22ರಂದು ಶ್ರೀ ಧೂಮಾವತಿ ಬಂಟ ದೈವಗಳ ಗಗ್ಗರಸೇವೆ, ನೇಮೋತ್ಸವ, ಬಂಡಿ ಉತ್ಸವ ಜರಗಲಿದೆ.