ಕಠ್ಮಂಡು, ಫೆ. 01 : ನೇಪಾಳದಲ್ಲಿ ಫೆ.28 ರಂದು ಮುಂಜಾನೆ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಹಾಗೆನೇ ಭಾರತ, ಟಿಬೆಟ್ ಮತ್ತು ಚೀನಾದ ಗಡಿ ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದೆ.
ಹಿಮಾಲಯನ್ನ ಮಧ್ಯಭಾಗದ ಸಿಂಧುಪಾಲ್‌ಚೌಕ್ ಜಿಲ್ಲೆಯ ಭೈರವಕುಂಡದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. ಸ್ಥಳೀಯ ಕಾಲಮಾನ ಬೆಳಗಿನ ಜಾವ 2.51ಕ್ಕೆ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ನಿರ್ವಹಣಾ ಮತ್ತು ಸಂಶೋಧನಾ ಕೇಂದ್ರ ತಿಳಿಸಿದೆ.
ನೇಪಾಳದ ಸಂಭವಿಸಿದ ಭೂಕಂಪನದಿಂದ ಯಾವುದೇ ಜೀವಹಾನಿಯಾಗಲಿ, ಗಾಯಗೊಂಡಿರುವುದಾಗಲಿ ವರದಿಯಾಗಿಲ್ಲ. ಆದರೆ ಭೂಕಂಪನ ಸಂಭವಿಸಿದ ಪ್ರದೇಶಗಳಲ್ಲಿ ಜನ ಆತಂಕಗೊಂಡಿದ್ದಾರೆ ಎಂದು ವರದಿಯಾಗಿದೆ