ಕದ್ರಿ ಮಾ. 04 : ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ ಮಂಗಳೂರು ಇದರ ವತಿಯಿಂದ ಶ್ರೀ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ನವೀಕೃತ ಗೊಂಡ ಶ್ರೀ ಗೋರಕ್ಷನಾಥ ಜ್ಞಾನ ಮಂದಿರ ಸಭಾಭವನ ಉದ್ಘಾಟನಾ ಸಮಾರಂಭ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯು ಮಾ. 2ರಂದು ಜರಗಿತು.
ಕದ್ರಿ ಶ್ರೀ ಯೋಗೇಶ್ವರ. ಮಠದ ಮಠಾಧಿಪತಿಗಳಾದ ಶ್ರೀ ಶ್ರೀ ರಾಜಾ ಯೋಗಿ ನಿರ್ಮಲ್ ನಾಥ್ ಜೀ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭ ನವೀಕೃತ ಗೊಂಡ ಶ್ರೀ ಗೋರಕ್ಷನಾಥ ಜ್ಞಾನ ಮಂದಿರ ಲೋಕಾರ್ಪಣೆ ಸಂಘದ ಅಧ್ಯಕ್ಷ ಕಿರಣ್ ಜೋಗಿ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಸಕ ವೇದವ್ಯಾಸ ಕಾಮತ್ ಅವರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮನಪಾ ಮಾಜಿ ಸದಸ್ಯೆ ಶಕೀಲಾ ಕಾವಾ, ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತಸರ ಎ.ಜೆ. ಶೆಟ್ಟಿ, ಕದ್ರಿ ಶ್ರೀ ಕೃಷ್ಣ ಮಂದಿರ ಇಲ್ಲಿನ ಸುಧಾಕರ ರಾವ್ ಪೇಜಾವರ, ಜೋಗಿ ಸಮಾಜದ ಪ್ರಮುಖರಾದ ಸಂಜೀವ ಜೋಗಿ, ಗೋವಿಂದ ಜೋಗಿ, ಕೋಟ ಶಿವರಾಮ ಜೋಗಿ, ಸಂಘದ ಉಪಾಧ್ಯಕ್ಷ ಡಾ| ಕೇಶವನಾಥ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಸ್ವಾಗತಿಸಿದರು. ಎಚ್.ಕೆ. ಪುರುಷೋತ್ತಮ್ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ‘ಗಂಗಾಧರ್ ವಂದಿಸಿದರು.