ಉಡುಪಿ, ಮಾ.05: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶ್ರೀ ಮಾರಿಯಮ್ಮ ದೇವರಿಗೆ ಮಹಾಬ್ರಹ್ಮಕಲಶಾಭಿಷೇಕ ನಡೆಸುವ ಮೂಲಕ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಬುಧವಾರ ಸಂಪನ್ನಗೊಂಡಿತು.
ವೇದಮೂರ್ತಿ ಕೆ.ಜಿ.ರಾಗವೇಂದ್ರ ತಂತ್ರಿ ಅವರ ಮಾರ್ಗದರ್ಶನದಲ್ಲಿ ವಿದ್ವಾನ್ ಕೆ.ಪಿ.ಕುಮಾರಗುರು ತಂತ್ರಿ ಹಾಗೂ ಇತರ ಅರ್ಚಕರ ನೇತೃತ್ವದಲ್ಲಿ ಮಹಾ ಬ್ರಹ್ಮಕಲಶಾಭಿಷೇಕ ನಡೆಯಿತು. ಬೆಳಿಗ್ಗೆ 8 ಗಂಟೆಗೆ ಮಂಗಳ ಗಣಯಾಗ, ಶಾಂಭವಿ ಕಾಲಾಮಾತೃಕಾರಾಧನೆ, ಕಾಲರಾತ್ರೀಕಾಲಾಮಾತೃಕಾರಾಧನೆ, ಮಂಡಲಾರ್ಚಣೆಯೊಂದಿಗೆ ಮಹಾ ಬ್ರಹ್ಮಕಲಶಾಭಿಷೇಕದ ಧಾರ್ಮಿಕ ವಿಧಿವಿಧಾನಗಳು ಮಾರಿಯಮ್ಮ ದೇವಿಯ ಬ್ರಹ್ಮಕಲಶಾಭಿಷೇಕದೊಂದಿಗೆ ಮುಕ್ತಾಯಗೊಂಡವು.
ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಹೂವುಗಳಿಂದ ಸುಂದರವಾಗಿ ಅಲಂಕರಿಸಲ್ಪಟ್ಟಿತ್ತು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಒಟ್ಟು 1,008 ಕಲಶಗಳನ್ನು ಭಕ್ತರಿಗೆ ವಿತರಿಸಲಾಯಿತು,ಮಹಾ ಬ್ರಹ್ಮಕಲಶಾಭಿಷೇಕದ ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ| ಕೆ. ಪ್ರಕಾಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕರೆ ರತ್ನಾಕರ ಶೆಟ್ಟಿ, ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗೌರವಾಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ, ಲಾಲಾಜಿ ಆರ್. ಮೆಂಡನ್, ಮೂಳೂರು ಸುಧಾಕರ ಹೆಗ್ಡೆ, ರವಿ ಸುಂದರ್ ಶೆಟ್ಟಿ, ಅನಿಲ್ ಬಲ್ಲಾಳ್ ಕಾಪು ಬೀಡು, ಕನ್ಯಾನ ಸದಾಶಿವ ಶೆಟ್ಟಿ, ಗಣ್ಯರಾದ ಐಕಳ ಹರೀಶ್ ಶೆಟ್ಟಿ ಕೆ. ರಘುಪತಿ ಭಟ್, ಕಾಪು ದಿವಾಕರ ಶೆಟ್ಟಿ, ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಮನೋಹರ ಎಸ್. ಶೆಟ್ಟಿ, ಉದಯ ಸುಂದರ್ ಶೆಟ್ಟಿ ಜಯ ಸಿ. ಕೋಟ್ಯಾನ್, ಭಾಸ್ಕರ್ ಎಂ. ಸಾಲ್ಯಾನ್, ಸುಹಾಸ್ ಹೆಗ್ಡೆ ನಂದಳಿಕೆ, ಅರುಣ್ ಶೆಟ್ಟಿ, ಪಾದೂರುದಿವಾಕರ್ ಶೆಟ್ಟಿ ಮಲ್ಲಾರು, ಮುಂಬಯಿ ಮಾಜಿ ಸಂಸದ ಗೋಪಾಲ ಶೆಟ್ಟಿ ವಿವಿಧ ಸಮಿತಿಗಳ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.