ಮಂಗಳೂರು, ಮಾ.6: ಸೈಂಟ್ ಅಲೋಶಿಯಸ್ ಪ್ರತಿಷ್ಠಾನಗಳು ಮತ್ತು ಸೈಂಟ್ ಅಲೋಶಿಯಸ್ ಕಾಲೇಜ್ ಅಲ್ಯುಮಿ ಅಸೋಸಿಯೇಶನ್ ಸಂಯುಕ್ತವಾಗಿ ಅಲೋಶಿಯನ್ ಅಲ್ಯುಮಿ ಪ್ರಶಸ್ತಿ -2025 ಕಾರ್ಯಕ್ರಮವನ್ನು ಮಾ.
8ರಂದು ಕಾಲೇಜಿನ ಎಲ್ಸಿಆರ್ಐ ಬ್ಲಾಕ್ನ ರಸ್ಕ್ವಿಂಹ ಸಭಾಂಗಣದಲ್ಲಿ ಆಯೋಜಿಸಿದೆ.
ಸಂಜೆ 5.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ 2025ರ ಅಲೋಶಿಯನ್ ಅಲ್ಯುಮ್ಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಹೇರಂಭಾ ಇಂಡಸ್ಟ್ರೀಸ್ ಲಿಮಿಟೆಡಂನ ಅಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ, ಸಿಐಒ ಆಫ್ ದಿ ಇಯರ್ ಪ್ರಶಸ್ತಿ ವಿಜೇತೆ ಲೂಸಿ ಮರಿಯಪ್ಪ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಬಹು ಪ್ರಶಸ್ತಿ ವಿಜೇತ ವಾಸ್ತುಶಿಲ್ಪಿ ಆಸ್ಕರ್ ಕಾಂಸೆಸಾವ್, ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಮೂರು ಉದ್ಯಮಗಳನ್ನು ನಿರ್ವಹಿಸುತ್ತಿರುವ ಜೇಮ್ಸ್ ವಿನ್ಸೆಂಟ್ ಮೆಂಡೋನ್ಸಾರಿಗೆ ಪ್ರದಾನ ಮಾಡಲಾಗುವುದು ಎಂದು ಸಂತ ಅಲೋಶಿಯಸ್ ಪರಿಗಣಿತ ವಿವಿಯ ಕುಲಪತಿ ರೆ.ಡಾ. ಪ್ರವೀಣ್ ಮಾರ್ಟಿಸ್ ಪ್ರೆಸ್ಕ್ಲಬ್ನಲ್ಲಿ ಗುರುವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಈ ಪ್ರಶಸ್ತಿಯಡಿ ಈಗಾಗಲೇ 45 ಜನ ಪ್ರಸಿದ್ದ ಅಲೋಶಿಯನ್ಗಳನ್ನು ಗೌರವಿಸಲಾಗಿದೆ. ಈ ಗೌರವಕ್ಕೆ ಪಾತ್ರರಾದ ಕೆಲವು ಗಣ್ಯ ವ್ಯಕ್ತಿಗಳು ಡಾ.ಎನ್. ವಿನಯ ಹೆಗ್ಡೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅನಂತ ಕೃಷ್ಣ (ಕರ್ನಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷರು), ದೇವಿ ಪ್ರಸಾದ್ ಶೆಟ್ಟಿ, ಯೆನೇಪೋಯ ಅಬ್ದುಲ್ಲಾ ಕುಂಞ, ಜಯರಾಮ್ ಭಟ್ (ಕರ್ನಾಟಕ ಬ್ಯಾಂಕಿನ ಮಾಜಿ ಸಿಇಒ), ಲೆಫ್ಟಿನೆಂಟ್ ಜನರಲ್ ನಂದಾ, ಪದ್ಮಭೂಷಣ ಕೆ.ಕೆ. ವೇಣುಗೋಪಾಲ್ (ಭಾರತ ಸರ್ಕಾರದ ಸೊಲಿಸಿಟರ್ ಜನರಲ್), ಪದ್ಮಭೂಷಣ ಕೆ.ವಿ.ಕಾಮತ್ (ಬ್ರಿಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರು) ಮತ್ತು ಎಂ.ವಿ. ನಾಯರ್ (ಕಾರ್ಪೊರೇಷನ್ ಬ್ಯಾಂಕಿನ ಮಾಜಿ ಅಧ್ಯಕ್ಷರು). ಭಾರತ ಸರ್ಕಾರವು ಇತ್ತೀಚೆಗೆ ಎಂ.ವಿ. ನಾಯರ್ ಅವರನ್ನು ನ್ಯಾಷನಲ್ ಬ್ಯಾಂಕ್ ಫಾರ್ ಫೈನಾನ್ಸಿಂಗ್ ಇನ್ಸಾಸ್ಟಕ್ಟರ್ ಅಂಡ್ ಡೆವಲಪ್ಮೆಂಟ್ ಸಂಸ್ಥೆಯ ಅಧ್ಯಕ್ಷರಾಗಿ ನೇಮಕ ಮಾಡಿದೆ ಎಂದು ಎಸ್ಸಿಎಯ ಅಧ್ಯಕ್ಷ ಅನಿಲ್ ಕುಮಾರ್ ಜೆ. ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಎಸ್ಸಿಎಯ ಕಾರ್ಯದರ್ಶಿ ಕೊನಾರ್ಡ್ ನಝರೆತ್ ಉಪಸ್ಥಿತರಿದ್ದರು.