ಕಾವೂರು, ಮಾ. 10 : ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಹ್ಮಕಲಶೋತ್ಸವವು ಮಾ, 1ರಿಂದ ಆರಂಭಗೊಂಡು 9ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳಿಂದ ಸಂಪನ್ನಗೊಂಡಿತು.
ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವದ ಆರಂಭದಿಂದಲೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯ ಕ್ರಮಗಳು ಜರಗಿದವು. ಮಾ.9, ರವಿವಾರ ಪ್ರಾತಃಕಾಲ 4.30ರಿಂದ ಕವಾಟ ಉದ್ಘಾಟನೆ, ತೈಲಾಭಿಷೇಕ ಪ್ರಾಯಶ್ಚಿತ್ತ ಶಾಂತಿ ಹೋಮ, ಕಲಶಾಭಿಷೇಕ, ತತ್ಪಕಲಶಾಭಿಷೇಕ, 6 ಗಂಟೆಯಿಂದ ಪರಿಕಲಶಾಭಿಷೇಕ ಪ್ರಾರಂಭ ಬೆಳಗ್ಗೆ 8.10ರಿಂದ 8.40ರ ಸಮಯದಲ್ಲಿ ನಡೆಯುವ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಅವಸುತೋಕ್ಷಾ ಬಲಿ ನಡೆಯಿತು.
ಬೆಳಗ್ಗೆ 11ರಿಂದ ಶ್ರೀ ದೇವರಿಗೆ ಮಹಾಪೂಜೆ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ವೈದಿಕ ಮಂತ್ರಾಕ್ಷತೆ, ಸಂಜೆ 7 ರಿಂದ ಶ್ರೀ ದೇವಿಗೆ ಮಹಾರಂಗಪೂಜೆ, ಬಲಿ ಉತ್ಸವ ನಡೆಯಿತು. ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಬಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.