ಮಂಗಳೂರು,ಮಾ.13: ಕರ್ನಾಟಕ ಕೊಂಕಣಿ ಸಾಹಿತ್ಯ ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ಮೈಸೂರು ಸಹಯೋಗದೊಂದಿಗೆ 23 ಮಾರ್ಚ್ 2025, ಆದಿತ್ಯವಾರ ಸಂಜೆ 5.00 ಗಂಟೆಗೆ ಕೊಂಕಣ್ ಭವನ್, ವಿಜಯನಗರ್ 2nd ಸ್ಟೇಜ್,ಮೈಸೂರಿನಲ್ಲಿ2024ನೇ ಸಾಲಿನ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ ಜರುಗಲಿರುವುದು ಎಂದು ಸ್ಟಾನಿ ಅಲ್ವಾರಿಸ್ ಅವರು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ವರ್ಷವಾರು ಕೊಂಕಣಿ ಸಾಹಿತ್ಯ, ಕಲೆ, ಜಾನಪದ ಈ ಮೂರು ಕ್ಷೇತ್ರದಲ್ಲಿ ಸಾಧನೆಗೈದ ಕೊಂಕಣಿ ಮಹನೀಯರನ್ನು ಗೌರವಿಸಲಾಗುತ್ತಿದ್ದು ಪ್ರಸ್ತುತ ಸಾಲಿನಲ್ಲಿ 2024 ನೇ ಸಾಲಿನ ಗೌರವ ಪ್ರಶಸ್ತಿಗಾಗಿ ಹಾಗೂ ಪುಸ್ತಕ ಪುರಸ್ಕಾರಕ್ಕಾಗಿ ಈ ಕೆಳಗಿನ ಮಹಾನಿಯರನ್ನು ಆಯ್ಕೆ ಮಾಡಲಾಗಿದೆ.
2024ನೇ ಸಾಲಿನ ಗೌರವ ಪ್ರಶಸ್ತಿ:
ಕೊಂಕಣಿ ಸಾಹಿತ್ಯ : ಮಂಗಳೂರಿನ ಶ್ರೀ ಎಂ. ಪ್ಯಾಟ್ರಿಕ್ ಮೊರಾಸ್, ಕೊಂಕಣಿ ಕಲೆ : ಮಂಗಳೂರಿನ ಶ್ರೀ ಜೊಯಲ್ ಪಿರೇರಾ, ಕೊಂಕಣಿ ಜಾನಪದ : ಹಳಿಯಾಳದ ಶ್ರೀಮತಿ ಸೊಬೀನಾ ಮೊತೇಶ್ ಕಾಂಬ್ರೆಕರ್,
2024ನೇ ಸಾಲಿನ ಪುಸ್ತಕ ಪುರಸ್ಕಾರ :
ಕೊಂಕಣಿ – ಕವನ ಪುಸ್ತಕ : “ಪಾಲ್ವಾ ಪೊಂತ್” – ದೆರೆಬೈಲ್ ನ ಶ್ರೀಮತಿ ಫೆಲ್ಸಿ ಲೋಬೊ, ಕೊಂಕಣಿ ಲೇಖನ ಪುಸ್ತಕ : ಶೆತಾಂ ಭಾಟಾಂ ತೊಟಾಂನಿ – ಕಾರ್ಕಳದ ಶ್ರೀ ಕಾರ್ಕಳದ ಶ್ರೀ ವಲೇರಿಯನ್ ಸ್ವಿಕೇರ.
ಗೌರವ ಪ್ರಶಸ್ತಿಯು ರೂ.50,000/-ನಗದು,ಪ್ರಮಾಣ,ಪತ್ರ, ಶಾಲು, ಹಾರ, ಪೇಟ, ಸ್ಮರಣಿಕೆ, ಫಲಪುಷ್ಪಗಳನ್ನು, ಒಳಗೊಂಡಿದೆ. ಪುಸ್ತಕ ಪುರಸ್ಕಾರವು ರೂ.25,000/- ನಗದು, ಪ್ರಮಾಣ ಪತ್ರ, ಶಾಲು, ಹಾರ, ಸ್ಮರಣಿಕೆ ಫಲಪುಷ್ಪಗಳನ್ನು ಒಳಗೊಂಡಿದೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ಮೈಸೂರು ಸಹಯೋಗದೊಂದಿಗೆ
23 ಮಾರ್ಚ್ 2025, ಆದಿತ್ಯವಾರ ಸಂಜೆ 5.00 ಗಂಟೆಗೆ ಕೊಂಕಣ್ ಭವನ್, ವಿಜಯನಗರ್ 2nd ಸ್ಟೇಜ್,
ಮೈಸೂರಿನಲ್ಲಿ ಜರುಗಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ. ಹರೀಶ್ ಗೌಡ ನೆರವೇರಿಸಲಿರುವರು.
ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರ ಅಧ್ಯಕ್ಷತೆಯಲ್ಲಿ, ವಿಧಾನಪರಿಷತ್
ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯನವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ
ಭಾಗಿಯಾಗಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ವಿಜೇತರಾದ ಶ್ರೀ ವಲೇರಿಯನ್ ಡಿಸೋಜ(ವಲ್ಲಿ ವಗ್ಗ),ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರುವಿಭಾಗದ ಜಂಟಿ ನಿರ್ದೇಶಕರಾದ ಶ್ರೀ ವಿ ಎನ್ ಮಲ್ಲಿಕಾರ್ಜುನ ಸ್ವಾಮಿ- ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿದ್ದಿ ಸಮುದಾಯದ ಸಾಂಸ್ಕೃತಿಕ ನೃತ್ಯ, ಬ್ರಾಸ್ ಬ್ಯಾಂಡ್, ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮವು ನಡೆಯಲಿರುವುದು.ಕೊಂಕಣಿ ಜಿ.ಎಸ್.ಬಿ. ಸಭಾ, ಮೈಸೂರು ಮತ್ತು ಮುರುಡೇಶ್ವರ ನವಾಯತ್ ಅಸೋಸಿಯೇಶನ್ ಮೈಸೂರು ಇವರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದ್ದಾರೆ ಎಂದು ಸ್ಟಾನಿ ಅಲ್ವಾರಿಸ್ ಅವರು ಹೇಳಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರತಿಕಾ ಗೋಷ್ಟಿಯಲ್ಲಿ
ಅಧ್ಯಕ್ಷರು ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಸದಸ್ಯರು ಶ್ರೀ ನವೀನ್ ಕೆನ್ಯುಟ್ ಲೋಬೊ, ಸದಸ್ಯರು ಶ್ರೀ ಸಮರ್ಥ ಭಟ್, ಸದಸ್ಯರು ಶ್ರೀ ರೊನಾಲ್ಡ್ ಕ್ರಾಸ್ತಾ ಹಾಗೂ ಶ್ರೀ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.