ಕೈಕಂಬ, ಮಾ. 15 : ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ಮಾರ್ಚ್ 9 ರಿಂದ 16ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ವೇ। ಮೂ। ಕೃಷ್ಣರಾಜ ತಂತ್ರಿ, ದೇಗುಲದ ಪವಿತ್ರಪಾಣಿ ರಮೇಶ್ ಉಡುಪ ಹಾಗೂ ಪ್ರಧಾನ ಅರ್ಚಕ ಎ. ಸದಾಶಿವ ಭಟ್, ಮಹೇಶ್ ಭಟ್ ಉಪಸ್ಥಿತಿಯಲ್ಲಿ ನವಗ್ರಹ ಶಾಂತಿ, ಸ್ವ ಶಾಂತಿ, ಚೋರ ಶಾಂತಿ, ಅದ್ಭುತ ಶಾಂತಿ ಹೋಮಗಳು, ಬೆಳಗ್ಗೆ 11ರ ವೃಷಭ ಲಗ್ನ ಸುಮುಹೂರ್ತದಲ್ಲಿ ನವಗ್ರಹ, ಶ್ರೀ ಶಾಸ್ತಾ ದೇವರ, ಮುಂಡಿತ್ತಾಯ ದೈವದ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷಸುಜಿತ್ ಆಳ್ವ ಬೈಲು ಏತಮೊಗರು ಗುತ್ತು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ, ಮುಂಬಯಿ ದೇಗುಲದ ರಕ್ಷಕ ಮನೆತನದ ರಮಾನಾಥ ಅತ್ತಾರ್ಏತಮೊಗರು, ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಡಿ. ಶೆಟ್ಟಿ, ಅಧ್ಯಕ್ಷ ಪ್ರಕಾಶ್ ಬಿ. ಭಂಡಾರಿ, ಉಪಾಧ್ಯಕ್ಷ ಸದಾನಂದ ಡಿ.ಶೆಟ್ಟಿಸಂಕೇಶ, ವ್ಯವಸ್ಥಾಪನ, – ಜೀರ್ಣೋ ದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿ ಕಾರಿಗಳು, ಸದಸ್ಯರು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ,ಕರ್ನಾಟಕ ಶಾಸ್ತ್ರೀಯ ಸಂಗೀತ, ಯಕ್ಷನಾಗ ಶಿವ ಮಹಾತ್ಮ ಮಧ್ಯಾಹ್ನ ಯಕಗಾನ ಭಾರತ ರತ್ನ ಪ್ರದರ್ಶನಗೊಂಡಿತು.