ಮಂಗಳೂರು, ಮಾ. 27 : ಕಾಸರಗೋಡು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಮಾ. 26ರಿಂದ ಎ. 7ರ ವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಇದರ ಅಂಗವಾಗಿ ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಹೊರೆಕಾಣಿಕೆ ಸಂಗ್ರಹ ಕೇಂದ್ರ ತೆರೆಯಲಾಗಿದೆ. ಮಾ. 27ರಂದು ಬೆಳಗ್ಗೆ 8.30ಕ್ಕೆ ಶರವು ದೇವಳದಿಂದ ಮಧೂರಿಗೆ ಹೊರೆಕಾಣಿಕೆ ಮೆರವಣಿಗೆ
ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಮಧುಸೂದನ ಆಯಾ ರ್ ಮಂಗಳವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 26ರಂದು ಬೆಳಗ್ಗೆ 10ಕ್ಕೆ ಮಹಾದ್ವಾರ ರಾಜಗೋಪುರ ಮತ್ತು ರಾಜಾಂಗಣ ಲೋಕಾರ್ಪ ಣೆಗೊಳ್ಳಲಿದೆ. ಅಪರಾಹ್ನ 3 ಗಂಟೆಗೆ ಮಧೂರು ಪಂಚಾಯತ್ ವ್ಯಾಪ್ತಿಯ ಹೊರೆಕಾಣಿಕೆ ಕ್ಷೇತ್ರಕ್ಕೆ ಸಮರ್ಪಣೆ ಆಗಲಿದೆ. ಬಳಿಕ ಬೇರೆ ಬೇರೆ ಪ್ರದೇಶಗಳಿಂದ ಹೊರಕಾಣಿಕೆ ಕ್ಷೇತ್ರಕ್ಕೆ ಬರುವ ನಿರೀಕ್ಷೆ ಇದೆ.ಬ್ರಹ್ಮಕಲಶೋತ್ಸವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. 4 ವೇದಿಕೆಗಳಲ್ಲಿ ಒಟ್ಟು 345 ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿವೆ ಎಂದರು.
ದಾನಿಗಳಾದ ಸದಾಶಿವ ಶೆಟ್ಟಿಕೂಳೂರು ಕನ್ಯಾನ, ಕೆ.ಕೆ. ಶೆಟ್ಟಿ ಮುಂಡಪಳ್ಳ ಮಹಾಬಲೇಶ್ವರ ಭಟ್ ಎಡಕ್ಕಾನ, ಡಾ| ಬಿ.ಎಸ್.ರಾವ್, ಶಶಿಕಿರಣ್ ಶೆಟ್ಟಿ ವಿಟ್ಲ ಈಶ್ವರ್ ಭಟ್, ಟಿ. ಶ್ಯಾಮ್ ಭಟ್, ರವೀಂದ್ರ ಆಳ್ವ ಕೋಟೆಕುಂಜ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಬಿ.ಕೆ. ಮಧೂರು ಅವರ ಹಾಗೂ ಕರಸೇವಕರ ನೆರವಿನಿಂದ ಸುಮಾರು 24 ಕೋ. ರೂ. ವೆಚ್ಚದಲ್ಲಿ ವಿವಿಧ ನವೀಕರಣ ಕೆಲಸಗಳಾಗಿವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ ಮಜಿಬೈಲು, ಉಪಾಧ್ಯಕ್ಷರಾದ ಸುಕುಮಾರ್ ಕುದ್ರೆಪಾಡಿ, ವಿಜಯ್ ರೈ ಮಲ್ಲಂಗೈ, ಸಾಂಸ್ಕೃತಿಕ ಸಮಿತಿ ಸಹಸಂಚಾಲಕ ರಾಜೇಶ್ ಮಾಸ್ಟರ್ ಅಗಲ್ಪಾಡಿ, ಜತೆ ಕಾರ್ಯದರ್ಶಿ ಚಂದ್ರಕಾಂತ್ ಉಪಸ್ಥಿತರಿದ್ದರು.