ನೇಪಿಟಾವ್, ಮಾ.28 : ಮ್ಯಾನ್ಮಾರ್ನಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ 60 ಮಂದಿ ಮೃತಪಟ್ಟಿದ್ದು, 250 ಮಂದಿ ಗಾಯಗೊಂಡಿದ್ದಾರೆ.ಮ್ಯಾನ್ಮಾರ್ನಲ್ಲಿ ಸತತ ಎರಡು ಭೂಕಂಪಗಳು ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.7 ಮತ್ತು 6.4 ತೀವ್ರತೆ ದಾಖಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಮ್ಯಾನ್ಮಾರ್ನ ಮಂಡಲೇಯಲ್ಲಿರುವ ಐಕಾನಿಕ್ ಅವಾ ಸೇತುವೆ ಭೂಕಂಪದಲ್ಲಿ ಕುಸಿದು ಬಿದ್ದಿದೆ.ಹಲವಾರು ಕಟ್ಟಡಗಳು ಕುಸಿದು ರಸ್ತೆಗಳು ಬಿರುಕು ಬಿಟ್ಟಿದೆ.ಮ್ಯಾನ್ಮಾರ್ ಜುಂಟಾ ಮುಖ್ಯಸ್ಥ ಮಿನ್ ಆಂಗ್ ಹ್ಲೈಂಗ್ ‘ತುರ್ತುಸ್ಥಿತಿ’ ಘೋಷಿಸಿದ್ದಾರೆ ಮತ್ತು ಅಂತರರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.