ಮಂಗಳೂರು,ಮಾ.31 : ನಾಡಿನಾದ್ಯಂತ ಮಾ.30ರಂದು ಯುಗಾದಿ ಹಬ್ಬವನ್ನು ಆಚರಿಸಲಾಯಿತು, ಮಕ್ಕಳು, ತಾಯಂದಿರು ಮನೆಯಲ್ಲಿ ರಂಗೋಲಿ ಬಳಿದು ಸ್ನಾನ ಮಾಡಿ ಯುಗಾದಿ ಹಬ್ಬವನ್ನು ಆಚರಿಸಿದರು.
ದೇವಸ್ಥಾನಗಳಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ-ಪುನಸ್ಕಾರಗಳು ನಡೆದವು.. ದಕ್ಷಿಣ ಭಾರತೀಯರಲ್ಲಿ
ಇದರ ಆಚರಣೆ ಹೆಚ್ಚು. ಉತ್ತರ ಭಾರತೀಯರು ಈ ದಿನವನ್ನು ಚೈತ್ರ ನವರಾತ್ರಿಯ ಮೊದಲ ದಿನವೆಂದು ಆಚರಿಸುತ್ತಾರೆ. ಭಕ್ತಾದಿಗಳು ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಮಹಾರಾಷ್ಟ್ರ ಕಡೆ ಗುಡಿ ಪಾಡ್ವ ಎಂದು ಕರೆಯುತ್ತಾರೆ.
ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭವನ್ನು ಹಾರೈಸಿದ್ದಾರೆ. ಯುಗಾದಿ ಹಬ್ಬದ ಅಡುಗೆ ದಿನ ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ಸೇವಿಸುತ್ತಾರೆ.