ಕಾಸರಗೋಡು, ಏ.05 : ಬೈಕ್ ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಶುಕ್ರವಾರ ಕಾಸರಗೋಡಿನ ಚೆಮ್ನಾಡ್ ನಲ್ಲಿ ನಡೆದಿದೆ.
ಮೃತರನ್ನು ಮೇಲ್ಪರಂಬ ಒರವಂಗರದ ಮುಹಮ್ಮದ್ ಹನೀಫ್ (26) ಎಂದು ಗುರುತಿಸಲಾಗಿದೆ.
ರಸ್ತೆಯ ಹೊಂಡಕ್ಕೆ ಬಿದ್ದ ಬೈಕ್ ಮೇಲೆ ಹಿಂದಿನಿಂದ ಬಂದ ಲಾರಿ ಹಾದು ಹೋಗಿದ್ದು, ಗಂಭೀರ ಗಾಯಗೊಂಡ ಹನೀಫ್ ರನ್ನು ಆಸ್ಪತ್ರೆಗೆ ತಲುಪಿಸಿದರೂ ಅದಾಗಲೇ ಮೃತಪಟ್ಟಿದ್ದರು ಎಂದು ವರದಿಯಾಗಿದೆ.