ಮಧೂರು, ಎ.8: ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದ ಮೂಡಪ್ಪ ಸೇವೆ ತಂತ್ರಿವರ್ಯ ಬ್ರಹಶ್ರೀ ಉಳಿಯತ್ತಾಯ ವಿಷ್ಣು ಆಸೆ ಅವರ ನೇತೃತ್ವದಲ್ಲಿ ಆದಿತ್ಯವಾರ ಬೆಳಿಗ್ಗೆ ಸಂಪನ್ನಗೊಂಡಿತು.
ಮೂಡಪ್ಪ ಸೇವೆ ಅಂಗವಾಗಿ ಶನಿವಾರ ರಾತ್ರಿ ಶಯ್ಯಾಕಲ್ಪನೆ, ಕವಾಟ ಬಂಧನದ ಬಳಿಕ ಮುಚ್ಚಲ್ಪಟ್ಟ ಶ್ರೀ ದೇವರ ಗರ್ಭಗೃಹದ ಕವಾಟೋದ್ಘಾಟನೆ ಬೆಳಗ್ಗೆ ನಡೆದು ಗರ್ಭಗೃಹ ಬಾಗಿಲು ತೆರೆಯಲಾಯಿತು. ಈ ವೇಳೆ
ಅಪೂಪ ಪರ್ವತದ (ಅಪ್ಪಕಜ್ಜಾಯ) ಮಧ್ಯದಿಂದ ಮೂಡಿಬರುವ ಬೊಡ್ಡಜ್ಜ ಶ್ರೀ ಮಧೂರು ಸಿದ್ಧಿವಿನಾಯಕ ದೇವರ ದಿವ್ಯ ದರ್ಶನದೊಂದಿಗೆ ವಿಶೇಷಾಭಿಷೇಕ, ಪ್ರಸನ್ನ, ಪೂಜೆ, ಅಪೂಪ(ಅಪ್ಪ)ಪ್ರಸಾದ ಮುಸ್ಸಂಜೆಯ ವರೆಗೂ ವಿತರಣೆ ನಡೆಯಿತು. ಬಳಿಕ 128 ಕಾಯಿ, ಅಷ್ಟದ್ರವ್ಯ ಮಹಾಗಣಪತಿಯಾಗ, ಮಹಾಪೂಜೆ ನಡೆಯಿತು. ಸಂಜೆ ಜಳಕದ ಬಲಿ, ಕಟ್ಟೆಪೂಜೆ, ಶ್ರೀ ದೇವರ ಕೆರೆಯಲ್ಲಿ ಅವಭೃತ ಸ್ನಾನ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯಿತು.
ಮೂಡಪ್ಪ ಸೇವೆ ವೀಕ್ಷಿಸಲು ರವಿವಾರ ಮುಂಜಾನೆ 1 ರ ವೇಳೆಗೆ ಜನರು ಆಗಮಿಸತೊಡಗಿದ್ದರು.ನೀರ್ಚಾಲ್ ಮಧೂರು ರಸ್ತೆಯ ಏರಿಕ್ಕಳ, ಕೊಲ್ಯಗಳಿಂದ ಸುಮಾರು 3 ಕಿ.ಮೀ. ದೂರದಿಂದ ಕಾಸರಗೋಡು ಸಹಿತದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಹಾಸನ, ಚಿಕ್ಕಮಗಳೂರು, ಬೆಂಗಳೂರು, ಕಣ್ಣೂರು ಜಿಲ್ಲೆಗ ಳಿಂದ ಜನರು ಆಗಮಿಸಿದ್ದರು. ದೇವಾಲಯದ ಪ್ರವೇಶ ದ್ವಾರ ಸಹಿತ ಎಂಟು ಕಿ.ಮೀ ವ್ಯಾಪ್ತಿಯಲ್ಲಿ ಸ್ವಯಂಸೇವರು ಜನರನ್ನು ನಿಯಂತ್ರಿಸಿದರು.ಜೊತೆಗೆ ಪೋಲೀಸರು, ಅಗ್ನಿಶಾಮಕದಳ, ಭಾರತಿ ಜಿಎಂಎಸ್ ಆಂಬ್ಯುಲೆನ್ಸ್ – ಸೇವಾ ಸ್ವಯಂಸೇವಕರು, ಸ್ವಯಂಸೇವಕರು ಸಹಕರಿಸಿದ್ದರು.
ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲ ಶೋತ್ಸವ ಹಾಗೂ ಮೂಡಪ್ಪ ಸೇವೆಯ ಸಮಾರೋಪ ಸಮಾರಂಭ ಎ.7ರಂದು ನಡೆಯಿತು.ಅಂದು ಬೆಳಗ್ಗೆ ಪಂಚ ವಿಂಶತಿ ಸಂಪ್ರೇಕ್ಷಣಾ ಕಲಶಾಭಿಷೇಕ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ, ನಡೆಯಿತು.ಬೆಳಗ್ಗೆ ಬೆಳಿಗ್ಗೆ ಸಮಾರೋಪ ಸಮಾರಂಭ ಭೆ ನಡೆಯಿತು.