ಮಂಗಳೂರು, ಏ.9 : ಮಾರ್ಚ್ 28 ರಿಂದ 30 ರವರೆಗೆ ತಮಿಳುನಾಡಿನ ಕರ್ಷಗ ವಿನಾಯಕ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ನಡೆದ ಎಸ್.ಎ.ಇ.ಐ.ಎಸ್.ಎಸ್ ಡೋನ್ ಡೆವಲಪ್ಮೆಂಟ್ ಚಾಲೆಂಜ್ 2025 ಸ್ಪರ್ಧೆಯ ಮೈಕ್ರೋ ಏರ್ ಕ್ರಾಫ್ಟ್ ವಿಭಾಗದಲ್ಲಿ ವಾಮಂಜೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆದಿದೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಡಾ.ರಿಯೋ ಡಿಸೋಜ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಏರೋ ಮಾಡೆಲಿಂಗ್ ಕ್ಲಬ್ – ಎಸ್ ಜೆಇಸಿ ಏರೋ ಮಾನವರಹಿತ ವೈಮಾನಿಕ ವ್ಯವಸ್ಥೆಗಳಲ್ಲಿ ನಾವೀನ್ಯತೆಗೆ ಒತ್ತು ನೀಡುತ್ತಿದೆ. ಶಾಲೆಗಳಿಗೆ ಭೇಟಿ ನೀಡಿ ಕಾರ್ಯಾಗಾರಗಳನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಏರೋ ಮಾಡಲಿಂಗ್ನಲ್ಲಿ ಆಸಕ್ತಿಯನ್ನು ಮೂಡಿಸುತ್ತಿದೆ ಎಂದರು.
ತಂಡದ ನಾಯಕ-ಅಕ್ಷಯ್ ಬಂಗೇರ, ಪೈಲಟ್ – ಮನಿಶ್’ ಎಂ.ಕೆ., ಸೈದ್ಧಾಂತಿಕ ತಂಡ- ಜೀವಿತ್ ಜಿ., ಆದಿತ್ಯ ಆರ್., ಗುರುಮಾಧವ ಎಚ್., ರಾಹುಲ್ ಟಿ.ಪಿ., ವಿನ್ಯಾಸ ತಂಡ- ಜೀವಿತ್ ಜಿ., ಮನ್ನಿಶ್ ಎಂ.ಕೆ., ಅಕ್ಷಯ್ ಬಂಗೇರ, ಲೇಖ್ನಾ ಶೆಟ್ಟಿ, ಕಂಪ್ಯೂಟೇಶನಲ್ ತಂಡ- ರಿಜಿಶ್ ಎ.ಜಿ., ರೇಣಿಕಾ, ಯತೀಶ್, ಸ್ಟ್ಯಾಂಜಿಲ್ ಫೆಮಿನ್ ಮೆನೆಜೆಸ್, ಅಕ್ಷಯ್ ಬಂಗೇರ ಈ ಸ್ಪರ್ಧೆಯ ಯಶಸ್ವಿಗೆ ಕಾರಣರಾಗಿರುತ್ತಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ನಿರ್ದೇಶಕ ಫಾದರ್ ವಿಲೈಡ್ ಪ್ರಕಾಶ್ ಡಿಸೋಜ, ಉಪ ಪ್ರಿನ್ಸಿ ಪಾಲ್ ಡಾ. ಪುರುಷೋತ್ತಮ ಚಿಪ್ಪಾರ್, ಟೀಮ್ ಕ್ಯಾಪ್ಟನ್ ಅಕ್ಷಯ್ ಬಂಗೇರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.