ಮಂಗಳೂರು, ಏ.9 : ಅಸ್ತ್ರ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣಗೊಂಡಿರುವ ‘ಮೀರಾ’ ತುಳು ಚಲನಚಿತ್ರ ಏ.11ರಂದು ಬಿಡುಗಡೆಯಾಗಲಿದೆ. ‘ಮೀರಾ’ ತುಳು ಸಿನೆಮಾಕ್ಕೆ ಅಶ್ವತ್ಥ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
ಮೀರಾ ಚಿತ್ರವು ತುಳು ಸಿನಿಮಾ ಇಂಡಸ್ಟ್ರಿಯಲ್ಲಿ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದೆ. ಚಿತ್ರದಲ್ಲಿ ಇಶಿತಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರವಿಂದ್ ಬೋಳಾರ್, ಸ್ವರಾಜ್ ಶೆಟ್ಟಿ, ಜೆ.ಪಿ. ತೂಮಿನಾಡು, ಪ್ರಕಾಶ್ ತೂಮಿನಾಡು, ಮಂಜು ರೈ ಮೂಳೂರು, ರೂಪಶ್ರೀ ವರ್ಕಾಡಿ, ಯತೀಶ್ ಪೂಜಾರಿ, ಅಶ್ವತ್ವ, ಬೇಬಿ ಲಕ್ಷ್ಯ, ಎಲ್. ಮೊದಲಾದ ಕಲಾವಿದರ ಜತೆ ಮುಂಬೈ ಮೂಲದ ತುಳು ಬ್ಲಾಗ್ ನಟಿ ರಕ್ಷಿತಾ ಶೆಟ್ಟಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರಾವಳಿ ಭಾಗದ ಅನೇಕ ಪ್ರತಿಭೆಗಳೂ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ ಎಂದು ಚಿತ್ರದ ನಿರ್ಮಾಪಕ ಲಂಚುಲಾಲ್ ಕೆ.ಎಸ್. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಚಿತ್ರದಲ್ಲಿ 5 ಹಾಡುಗಳಿದ್ದು, ಹಿನ್ನೆಲೆ ಗಾಯಕರಾದ ಮಧುಬಾಲಕೃಷ್ಣನ್ ಸೇರಿದಂತೆ ಹೆಸರಾಂತ ಗಾಯಕರ ಧ್ವನಿಯಲ್ಲಿ ಮೂಡಿ ಬಂದಿದೆ. ಮೀರಾ ಚಲನಚಿತ್ರದ ಡಿಒಪಿ ಅಜಯ್ ಕೆ.ಎಸ್., ಸಂಕಲನ ಜಾಬಿನ್ಸ್ ಸೆಬಾಸ್ಟಿಯನ್ .ಸಂಗೀತ ಸಂಯೋಜನೆ ರಜ್ಜು ಜಯ ಪ್ರಕಾಶ್, ಗೀತೆರಚನೆ ಜಯಪ್ರಕಾಶ್ ಕಳೇರಿ ನಿರ್ವಹಿಸಿದ್ದಾರೆ. ಲಿಜು ಪ್ರಭಾಕರ್ ಚಿತ್ರದ ಡಿಐ ವಿಭಾಗವನ್ನು ನಿರ್ವಹಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಅಶ್ವತ್ಥ್, ನಟ ಸ್ವರಾಜ್ ಶೆಟ್ಟಿ, ನಟಿ ಇಶಿತಾ ಶೆಟ್ಟಿ ಉಪಸ್ಥಿತರಿದ್ದರು