ಮಂಗಳೂರು,ಏ.11: ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊ ರೇಷನ್ ಲಿ.(ಐಆರ್‌ಸಿಟಿಸಿ) ಮಂಗಳೂರು ಹಾಗೂ ಸುತ್ತಮುತ್ತಲಿನ ಮತ್ತು ಪ್ರದೇಶಗಳ ಪ್ರವಾಸಿಗರು ಯಾತ್ರಾರ್ಥಿಗಳ ಅನುಕೂಲಕ್ಕಾಗಿ, ಐಆರ್ ಸಿಟಿಸಿ ಮಂಗಳೂರಿನಿಂದ ಹೊರಡುವ ಹೊಸ ರೈಲು ಮತ್ತು ವಿಮಾನ ಪ್ರಯಾಣ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ ಎಂದು ಪ್ರವಾಸೋದ್ಯಮ ಜಂಟಿ ಜನರಲ್ ಮ್ಯಾನೇಜರ್ ಸ್ಯಾಮ್ ಜೋಸೆಫ್ ಪಿ. ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐಆರ್ ಸಿಟಿಸಿ ಅಯೋಧ್ಯೆ ದರ್ಶನದೊಂದಿಗೆ ವಾರಣಾಸಿ ಎಂಬ ವಿಶೇಷ ವಿಮಾನ ಪ್ಯಾಕೇಜ್ ನೀಡಲಿದೆ. ಈ ಪ್ರವಾಸವು ಮಂಗಳೂರು ವಿಮಾನ ನಿಲ್ದಾಣದಿಂದ ಮೇ 6ರಂದು ಹೊರಡಲಿದೆ. ಮಂಗಳೂರಿನಿಂದ ವಾರಣಾಸಿ, ಅಯೋಧ್ಯೆ, ಪ್ರಯಾಗ್ ರಾಜ್ ಏರ್ ಟೂ ರ್ ಪ್ಯಾಕೇಜ್ ಬೆಲೆ ಪ್ರತಿ ವ್ಯಕ್ತಿಗೆ 36,700 ರೂ. ಆಗಲಿದೆ. ವಿಶೇಷ 6 ದಿನಗಳ ವಿಮಾನ ಪ್ರಯಾಣ ಪ್ಯಾಕೇಜ್ ಗಳೊಂದಿಗೆ ಮಂಗಳೂರಿನಿಂದ ಕಾಶ್ಮೀರ ಏರ್ ಟೂ ರ್ ಪ್ಯಾಕೇಜ್ ಇದ್ದು, ಮಂಗಳೂ ರಿನಿಂದ ಆ.25ರಂದು ಹೊರಡಲಿದೆ. ಬೆಲೆಯು ಪ್ರತಿ ವ್ಯಕ್ತಿಗೆ 51,700 ರೂ.ನಿಂದ ಪ್ರಾರಂಭವಾಗುತ್ತವೆ ಎಂದು ಹೇಳಿದರು.
ಮಂಗಳೂರಿನಿಂದ ಊಟಿಗೆ ಪ್ರತಿ ಗುರುವಾರ 5 ದಿನಗಳ ರೈಲು ಪ್ರವಾಸ ಪ್ಯಾಕೇಜ್ ನೀಡುತ್ತಿದ್ದು, ಪ್ರವಾಸ ಪ್ಯಾಕೇಜ್ ಬೆಲೆ ಪ್ರತಿ ವ್ಯಕ್ತಿಗೆ 8,545 ರೂ. ಆಗಲಿದೆ. ಅಂತಾ ರಾಷ್ಟ್ರೀಯ ಪ್ಯಾಕೇಜುಗಳಲ್ಲಿ, ಮೇ 3ರಂದು ಬೆಂಗಳೂರುನಿಂದ ದಕ್ಷಿಣ ಕೊರಿಯಾಕ್ಕೆ 8 ದಿನಗಳ ಪ್ರವಾಸ ಪ್ಯಾಕೇಜ್ ನೀಡಲಿದ್ದು, ಪ್ರತಿ ವ್ಯಕ್ತಿಗೆ 2,19,000 ರೂ.ಯಿಂದ ಆರಂಭ ವಾಗುತ್ತದೆ.
ಮೇ 19ರಂದು ಬೆಂಗಳೂರಿನಿಂದ ಯುರೋಪ್ ಗೆ ಹೊರಡುವ 13 ದಿನಗಳ ಪ್ರವಾಸ ಪ್ಯಾಕೇಜ್ , ಪ್ರತಿ ವ್ಯಕ್ತಿಗೆ 3,78,500 ರೂ.ಯಿಂದ ಆರಂಭವಾಗುತ್ತದೆ. ಮೇ 22ರಂದು ಕೊಚ್ಚಿಯಿಂದ ನೇಪಾಳಕ್ಕೆ ಹೊರಡುವ 6 ದಿನಗಳ ಏರ್ ಟೂ ರ್ ಪ್ಯಾಕೇಜ್ ಪ್ರತಿ ವ್ಯಕ್ತಿಗೆ 60,500 ರೂ.ಯಿಂದ ಪ್ರಾರಂಭ ವಾಗುತ್ತದೆ. ಮೇ 27ರಂದು ಕೊಚ್ಚಿಯಿಂದ ಶ್ರೀಲಂಕಾಕ್ಕೆ ಹೊರಡುವ 7 ದಿನಗಳ ಏರ್ ಟೂ ರ್ ಪ್ಯಾಕೇಜ್ ಪ್ರತಿ ವ್ಯಕ್ತಿಗೆ 61,900 ರೂ. ಯಿಂದ ಪ್ರಾರಂಭ ವಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರವಾಸೋದ್ಯಮ ಹಿರಿಯ ಕಾರ್ಯ ನಿರ್ವಾಹಕ ವಿನೋದ್ ನಾಯರ್, ಐಆರ್ ಸಿಟಿಸಿ ಮಂಗಳೂರು, ಕಚೇರಿ ಸಲಹೆಗಾರ ರಾಜೀವನ್ ನಂಬಿಯಾರ್, ಐಆರ್‌ಸಿಟಿಸಿ ಮೈಸೂರು ಪ್ರವಾಸೋದ್ಯಮ ಸಿಬ್ಬಂದಿ ಇಮಾನ್ ಅಹ್ಮದ್ ಉಪಸ್ಥಿತರಿದ್ದರು.