ಮಂಗಳೂರು, ಎ. 14 : ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನೀರಿನಿಂದ ಹೈಡೋಜನ್ ತಯಾರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಬರಲಿದೆ. ಮುಖ್ಯ ಭೂಮಿಕೆಗೆ ಕಾರ್ಖಾನೆಗಳಲ್ಲಿ ಆರಂಭಿಕ ಹಂತದಲ್ಲಿ ಹಸುರು ಹೈಡೋಜನ್ ಬಳಸಲು ಒತ್ತು ನೀಡಲಾಗುತ್ತಿದೆ ಎಂದು ಹೈಡ್ಜೆನ್ ಸಂಸ್ಥೆಯ ನಿರ್ದೇಶಕ ಡಾ| ಮಾಣಿಗಾಗಿ ಕೃಷ್ಣಕುಮಾರ್ ಅವರು ಸಹ್ಯಾದ್ರಿ ಕಾಲೇಜಿನಲ್ಲಿರುವ ಹೈಡೋ ಜನ ಇನ್ನೋವೇಶನ್ ಪ್ರೈವೇಟ್ ಲಿ ವತಿಯಿಂದ ಹೈಡೋಜನ್ ‘ನಾವೀನ್ಯತೆ ದಿನಾಚರಣೆ ಹಿನ್ನೆಲೆ ಕಾಲೇಜಿನ ಆವರಣ ದಲ್ಲಿ ಆಯೋಜಿಸಲಾಗಿದ್ದ ಪ್ರಾತ್ಯಕ್ಷಿಕೆಯಕುರಿತು ಮಾಹಿತಿ ನೀಡಿದರು.
ಸೋಲಾರ್, ಎಂಡ್, ಹೈಡ್ರೋ ಪವರ್ ದೇಶದಲ್ಲಿ ಲಭ್ಯವಿದ್ದು, ಇವುಗಳನ್ನು ನೇರವಾಗಿ ಸಂಗ್ರಹಿಸಿಡುವ ವ್ಯವಸ್ಥೆ ಇಲ್ಲ. ಹೈಡೋಜನ್ ಸಂಗ್ರಹಿಸಿ ಡಲು ಸಾಧ್ಯವಿದೆ, ರಸಗೊಬ್ಬರ, ಉಕ್ಕು ರಾಸಾಯನಿಕಗಳು ಹಾಗೂ ಸಂಸ್ಕರಣಾ ವಲಯಗಳಿಗೆ ಹೈಡೋಜನ್ ಭವಿಷ್ಯದ ಶಕ್ತಿ. ಹಸಿರು ಇಂಧನಕ್ಕೆ ಪೂರಕವಾಗಿ ಹೈಡ್ರೋ ಜನ್ ತಯಾರಿಸಲು ಕ್ರಮ ಕೈಗೊಂಡಿರುವುದಾಗಿ ಎಂದು ಅವರು ಹೇಳಿದರು.
ಹೈಡೈನ್ ನ ಘಟಕ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಹೈಡೋಜನ್ ಗ್ಯಾಸ್ ತಯಾರಿಸಲು ಬೇಕಾದ ಎಲೆಕ್ಟ್ರೊಲೈಸರ್ ಗಳನ್ನು ತಯಾರಿಸಿ ಪರೀಕ್ಷಿಸಲಾಗುತ್ತಿದೆ. ದೇಶದಲ್ಲಿ 25 ಕಿ.ವ್ಯಾ. ಘಟಕ ಅನ್ವೇಷಣೆ ಇದೇ ಮೊದಲ ಬಾರಿಗೆ ಮಾಡಲಾಗಿದೆ ಎಂದರು.
ಕೆಆರ್ ಇಡಿಎಲ್ನ ಚೇರ್‌ಮನ್ ಹಾಗೂ ಶಾಸಕ ಟಿ.ಡಿ. ರಾಜೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹೈಡೈನ್ ಚೇರ್‌ಮೆನ್’ ಡಾ| ಮೈಕಲ್ ಗ್ರೆಸೀಲ್ಸ್, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಡಾ| ಇಂಜಗನೇರಿ, ಹಿರಿಯ ವಿಜ್ಞಾನಿ, ಡಿಎಸ್‌ಟಿ ಸಂಸ್ಥೆಯ ನಿರ್ದೇಶಕ ಡಾ| ರಂಜಿತ್ ಕೃಷ್ಣ ಪೈ, ಮುಖ್ಯ ತಾಂತ್ರಿಕ ಅಧಿಕಾರಿ ಗೌತಮ್ ದಳಪತಿ, ಕಾಲೇಜಿನ ಸಂಶೋಧನಾ ವಿಭಾಗದ ನಿರ್ದೇಶಕ ಪ್ರೊ| ಮಂಜಪ್ಪ, ಹಿರಿಯ ಕಾರ್ಯಕ್ರಮ ಮುಖ್ಯಸ್ಥ ಡಾ| ದೀಪಕ್ ಯಾದವ್, ಹೈಡೆನ್ ಕಂಪೆನಿಯ ನಿರ್ದೆಶಕಿ ರಮ್ಯಶ್ರೀ ಮೊದಲಾದವರು ಉಪಸ್ಥಿತರಿದ್ದರು.