ಮಂಗಳೂರು, ಎ.22 : ಪಾವನಿ ಸಿಲ್ಕ್ಸ್ ಮತ್ತು ಟೆಕ್ಸ್‌ಟೈಲ್ಸ್ ಸಂಸ್ಥೆಯ 2ನೇ ಮಳಿಗೆ ನಗರದ ಭವಂತಿ ಸ್ಟ್ರೀಟ್ನ ಮಹಾಲಕ್ಷ್ಮೀ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ಶುಭಾರಂಭಗೊಂಡಿತು. ಕಟ್ಟಡದ ಮಾಲಕ ರವೀಂದ್ರ ನಿಕಮ್ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಮಕ್ಕಳಿಂದ ದೀಪ ಪ್ರಜ್ವಲನೆ ನಡೆಸಲಾಯಿತು.
ಮುಖ್ಯ ಅತಿಥಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಉದ್ಯಮ ಬಹಳ ಸವಾಲು ಎದುರಿಸುತ್ತಿದೆ.ಬಟ್ಟೆ ವಿನ್ಯಾಸದಲ್ಲಿ ನಿರಂತರ ಬದಲಾವಣೆ ವ್ಯಾಪಾರಿಗಳಿಗೆ ಸವಾಲಾಗಿದೆ. ಗ್ರಾಹಕರಿಗೆ ಸಂತೃಪ್ತಿಯ ಸೇವೆ, ಸಿಬ್ಬಂದಿಗಳ ಉತ್ತಮ ನಗುಮೊಗದ ಸೇವೆಯಿಂದ ವಾಪಾರದಲ್ಲಿ ಯಶಸ್ಸು ಸಾಧ್ಯ ಎಂದರು.
ದೈವಜ್ಞ ಕೆ.ಸಿ.ನಾಗೇಂದ್ರ ಭಾರದ್ವಾಜ್ ಅವರು ಮಾತನಾಡಿ,ಸಂಸ್ಥೆಯ 10ನೇ ವರ್ಷದ ಸಂಭ್ರಮದಲ್ಲಿದ್ದೇವೆ. ಸಂಸ್ಥೆಯು ಈಗ ಮತ್ತೊಂದು ಶಾಖೆ ಆರಂಭಿಸಿದ್ದು, ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಐಸಿವೈಎಂ ನಿರ್ದೇಶಕ ರೆ. ಫಾ.ಅಶ್ವಿನ್ ಕಾರ್ಡೋಝ ,ಬೋಳಾರ ಮುಹಿಯುದ್ದೀನ್ ಜುಮಾ ಮಸೀದಿಯ ಬಿ.ಕೆ.ಇಲ್ಯಾಸ್ ಬಾಖವಿ ಖತೀಬ್, ವಕೀಲರಾದ ದಯಾನಂದ ರೈ , ವಕೀಲರಾದ ಅಬ್ದುಲ್ ಖಾದರ್ ಇಡ್ಯಾ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಟ್ಟಡದ ಮಾಲಕರಾದ ರವೀಂದ್ರ ನಿಕಂ, ಅರುಣ್ ನಿಕಂ, ದ.ಕ. ಟೆಕ್ಸ್ ಟೈ ಲ್ಸ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಯಶವಂತ್ ವಿ. ರಾವಲ್, ಬಾಲಣ್ಣ ತಮಿಳುನಾಡು, ಗುತ್ತಿಗೆದಾರರಾದ ಶರತ್ ಚಂದ್ರ, ಅನೂಪ್ ಬಂಗೇರ, ದೀಕ್ಷಿತ್ ರಾಜ್ ಅವರನ್ನು ಸನ್ಮಾನಿಸಲಾಯಿತು.ಚೇತನ್ ಪಿಲಿಕುಳ ಕಾರ್ಯಕ್ರಮ ನಿರ್ವಹಿಸಿದರು.