ಸುರತ್ಕಲ್, ಎ.29 : ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ನಾಗಮಂಡಲ ಸೇವೆ ಎ.25, ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ನಾಗಪಾತ್ರಿ ರಾಮಮೂರ್ತಿ ಬೆಳ್ಳಿಪಾಡಿ ರಮಾನಂದ ಭಟ್ಟರ ನೇತೃತ್ವದಲ್ಲಿ ಕೃಷ್ಣಪ್ರಸಾದ ವೈದ್ಯ ಮತ್ತು ಬಳಗ ಮಧೂರು ಅವರ ಡಮರು ಮೇಳದಲ್ಲಿ ಬಾಲಕೃಷ್ಣ ವೈದ್ಯ ಮತ್ತು ನಟರಾಜ ವೈದ್ಯರ ನಾಗಕನ್ನಿಕಾ ನೃತ್ಯ ಸೇವೆಯೊಂದಿಗೆ ನಾಗ ಮಂಡಲ ಸೇವೆ ಜರುಗಿತು.
ಈ ಸಂದರ್ಭದಲ್ಲಿ ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ಡಾ.ಶಿವ ಪ್ರಸಾದ್ ತಂತ್ರಿ ದೇರೆಬೈಲ್ ನೇತೃತ್ವ ವಹಿಸಿದ್ದ ರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ಯಾದವ ಕೋಟ್ಯಾನ್ ಪೆರ್ಮುದೆ, ಕಾರ್ಯಾ ಧ್ಯಕ್ಷ ಪ್ರಶಾಂತ್ ಮೂಡಾಯಿಕೋಡಿ, ಪ್ರಧಾನ ಕಾರ್ಯದರ್ಶಿ ಪಿ.ಸದಾಶಿವ ಐತಾಳ್, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಕುಮಾರ್ ಭಂಡಾರಿ, ಎ.ವಾದಿರಾಜ, ಜಿ.ಕೆ. ಸುಂದರ್, ಪ್ರಧಾನ ಅರ್ಚಕ ಸುನಿಲ್ ಭಟ್, ಅನುರಾಧಾ, ಹೇಮಾವತಿ, ಹೊನ್ನಯ್ಯ ಕೋಟ್ಯಾನ್, ದಯಾನಂದ ಪದಾಧಿಕಾರಿಗಳು ಉಪಸ್ಥಿತರಿದ್ದರು.