ಮಂಗಳೂರು, ಮೇ 05 : ನಿಧಿಲ್ಯಾಂಡ್ ಇನ್ ಫ್ರಾಸ್ಟಕ್ಟರ್ ಡೆವಲಪರ್ ಇಂಡಿಯಾ ಪೈವೇಟ್ ಲಿಮಿಟೆಡ್ನವರ ವಸತಿ ಸಮುಚ್ಚಯ ‘ಪೂರ್ವಜ್’ ಗೆ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಮಲ್ಲಿಕಟ್ಟೆ ಶಿವಬಾಗ್ ಬಳಿ ಬುಧವಾರ ನೆರವೇರಿತು.
ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಮಹಾನಗರಪಾಲಿಕೆ ಪ್ರಕಾಶ್ ಸಾಲಿಯಾನ್, ನವೀನ್ ಡಿ’ಸೋಜ, ಮಾಜಿ ಸದಸ್ಯರಾದ ಸಿಎಶಾಂತಾರಾಮ ಶೆಟ್ಟಿ, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಮುಖ್ಯಸ್ಥ ಬಿ.ಕೆ.ವಿಶ್ವೇಶ್ವರಿ, ಲೋಟಸ್ ಪ್ರಾಪರ್ಟೀಸ್ನ ಜಿತೇಂದ್ರ ಕೊಟ್ಟಾರಿ, ನಿಶಾಂತ್ ಶೇಟ್, ಮುಡಾ ಮಾಜಿ ಅಧ್ಯಕ್ಷ ರವಿಶಂಕರ ಮಿಜಾ ಅತಿಥಿಗಳಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಭೂಮಿ ಪೂಜೆ ಹಾಗೂ ಇತರ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಉಪ್ಪುಂದ ಗಣೇಶ್ ಭಟ್ ಹಾಗೂ ಸಂತ ಆ್ಯಗ್ನೆಸ್ ಕಾನ್ವೆಂಟ್ನ ಸುಪೀರಿಯ ಸಿlಮರಿಯಾ ರೂಪ ಅವರ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನಡೆಯಿತು.
ನಿಧಿಲ್ಯಾಂಡ್ ಬಿಲ್ಲರ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಸನಿಲ್, ಅವರ ತಂದೆ ಯು.ಮಾಧವ ಸುವರ್ಣ, ನಿಧಿಲ್ಯಾಂಡ್ ನಿರ್ದೇಶಕರೂ ಆದ ಪ್ರಶಾಂತ್ ಅವರ ಸೋದರಿ ರೇವತಿ ಸನಿಲ್ ಹಾಗೂ ಪತ್ನಿ ನೈನಾ ಸನಿಲ್ ಪಾಲ್ಗೊಂಡಿದ್ದರು.
ಪೂರ್ವಜ್ ಸಮುಚ್ಚಯವು ಶಿವಬಾಗ್‌ನಲ್ಲಿ ನಿರ್ಮಾಣಗೊಳ್ಳಲಿದ್ದು, ತಳ ಭಾಗದಲ್ಲಿ ಎರಡು ಅಂತಸ್ತಿನ ಪಾರ್ಕಿಂಗ್, ನೆಲ ಅಂತಸ್ತಿನಲ್ಲಿ ಕ್ಲಬ್ ಹೌಸ್ ಇರಲಿದೆ. 12 ಮಹಡಿಗಳಲ್ಲಿ ವಿಶಿಷ್ಟ 4 ಬಿಎಚ್ ಮನೆಗಳನ್ನು ಹೊಂದಿದೆ. ಪ್ರತಿಯೊಂದು ಮಹಡಿಗೂ ಒಂದೊಂದು ಅಪಾರ್ಟ್ಮೆಂಟ್ ವಿದ್ದು, ರೂಫ್ ಟಾಪ್ ಓಝೋನೈಸ್ಡ್ ಸ್ವಿಮ್ಮಿಂಗ್ ಪೂಲ್, ಜಿಮ್ನಾಸಿಯಮ್, ಬೋರ್ಡ್ ಆಟಗಳ ಕೊಠಡಿ, ಸೌನಾ, ಸ್ಟೀಮ್ ರೂಂ, ಜಕುಜಿ, ಸಭಾಂಗಣ ಸೇರಿದಂತೆ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಳ್ಳಲಿದೆ.