ಮಂಗಳೂರು, ಮೇ 16 : ಫಳ್ನೀರ್ ನ ಲುಲು ಸೆಂಟರ್‌ನಲ್ಲಿರುವ ದಾರುಲ್ ಇಲ್ಮ್ ಮದ್ರಸ ತನ್ನ 20ನೇ ವರ್ಷವನ್ನು ಆಚರಿಸುವ ಸಂದರ್ಭದಲ್ಲಿ ಅದರ ಹಳೆಯ ಕಟ್ಟಡವನ್ನು ನವೀಕರಿಸಿ, ಮೇ 17 ರಂದು ಸಂಜೆ 4.30ಕ್ಕೆ ನವೀಕೃತ ಕಟ್ಟಡದ ಉದ್ಘಾಟನೆ ನಡೆಯಲಿದೆ ಎಂದು ದಾರುಲ್ ಇಲ್ಡ್ ಸ್ಥಾಪಕ ರಫೀಉದ್ದೀನ್ ಕುದ್ರೋಳಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕುದ್ರೋಳಿ ಜಾಮಿಯ ಮಸೀದಿ ಖಾಝಿ ಮುಷ್ಠಿ ಮುತಾಹ ಹುಸೈನ್ ಕಾಸಿಮಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಸಿ.ಪಿ. ಹಬೀಬ್ ರಹ್ಮಾನ್, ಎಸ್.ಎಂ. ರಶೀದ್, ಅಬ್ದುಸ್ಸಲಾಮ್ ಪುತ್ತಿಗೆ, ಅಬ್ದುಲ್ ಖಾದರ್ ಬಾವ, ಹೈದರ್ ಪರ್ತಿಪ್ಪಾಡಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಾಪಕ ಮುಹಮ್ಮದ್ ಸೈಫುದ್ದೀನ್, ಶೇಖ್ ಅಹ್ಮದ್, ಮುಹಮ್ಮದ್ ಆಸಿಫ್, ಅಬೂಬಕರ್, ಆರ್ಶ್‌ಲಾನ್ ಉಪಸ್ಥಿತರಿದ್ದರು.