ಬೆಂಗಳೂರು,ಮೇ.22 : ಸ್ಯಾಮಿಸ್ ಡ್ರೀಮ್ಲ್ಯಾಂಡ್ ಸಂಸ್ಥೆಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರ ಹೃದಯಭಾಗದ ನಡುವೆ ನಿರ್ಮಾಣವಾಗುತ್ತಿರುವ ಉನ್ನತ ಮಟ್ಟದ ನಿವಾಸಗಳಿಗಾಗಿ ಎಂಬೆಸಿ ಬೊಲೆವಾರ್ಡ್, ಗೋದ್ರೇಜ್, ಅಸೆಟ್ಜ್, ಪೂರ್ವಂಕರ ಮುಂತಾದ ಪ್ರತಿಷ್ಠಿತ ಬೃಹತ್ ನಿರ್ಮಾಣ ಪಾಲುದಾರರೊಂದಿಗೆ ಸ್ಯಾಮಿಸ್ ಡ್ರೀಮ್ಲ್ಯಾಂಡ್ ಕೈಜೋಡಿಸಿದೆ. ಅಂತರಾಷ್ಟ್ರೀಯ ಹಾಗೂ ಅಮೇರಿಕಾದ ವಾಸ್ತುಶಿಲ್ಪ ಶೈಲಿಯಲ್ಲಿ ವಿನ್ಯಾಸಗೊಂಡಿರುವ ಈ ಯೋಜನೆಯು ಪ್ರಸ್ತುತ ಅತ್ಯಂತ ಬೇಡಿಕೆಯಲ್ಲಿದೆ. ನೋಂದಣಿಗಾಗಿ ಈಗ ಅವಕಾಶ ಕಲ್ಪಿಸಲಾಗಿದೆ.
ಸ್ಯಾಮಿಸ್ ಡ್ರೀಮ್ಲ್ಯಾಂಡ್ ತನ್ನ ಎರಡು ಹೆಗ್ಗುರುತಿನ ವಸತಿ ಯೋಜನೆಗಳಾದ ನೇಚರ್ಸ್ ಬೊಲೆವಾರ್ಡ್ ಮತ್ತು ಸನ್ರೈಸ್ ಬೊಲೆವಾರ್ಡ್ ಇವುಗಳನ್ನು ನಿನ್ನೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿಶೇಷ ಚಾನೆಲ್ ಪಾಲುದಾರರ ಹಾಗೂ ಮಾಧ್ಯಮ ಪ್ರತಿನಿಧಿಗಳ ಸಮಾವೇಶದಲ್ಲಿ ಹೆಮ್ಮೆಯಿಂದ ಲೋಕಾರ್ಪಣೆಗೊಳಿಸಿತು.
ಈ ಯೋಜನೆಗಳ ಹಿಂದಿನ ದಾರ್ಶನಿಕರಾದ ಶ್ರೀ ಸ್ಯಾಮಿ ನನ್ವಾನಿ ಅವರು, ನಗರ ವಿಕಾಸದ ಕುರಿತಾದ ತಮ್ಮ ದೀರ್ಘಕಾಲೀನ ಮುನ್ನೋಟವನ್ನು ಸಭಿಕರೊಂದಿಗೆ ಹಂಚಿಕೊಂಡರು. ನೇಚರ್ಸ್ ಬೊಲೆವಾರ್ಡ್ ಮತ್ತು ಸನ್ರೈಸ್ ಬೊಲೆವಾರ್ಡ್ಗಳ ಮೂಲಕ ನಾವು ಕೇವಲ ಗೃಹಗಳನ್ನು ನಿರ್ಮಿಸುತ್ತಿಲ್ಲ ಬದಲಾಗಿ ಪ್ರಕೃತಿ ಮತ್ತು ಆಧುನಿಕತೆಗಳು ಸುಲಲಿತವಾಗಿ ಒಂದಾಗುವ ಸಾಮರಸ್ಯದ ತಾಣಗಳನ್ನು ನಾವು ಸೃಷ್ಟಿಸುತ್ತಿದ್ದೇವೆ ಎಂದು ಅವರು ನುಡಿದರು.
ಸಮಾರಂಭದಲ್ಲಿ ಮಿಸ್ ಗ್ಲೋಬಲ್ ಇಂಡಿಯಾ 2024- ಕುಮಾರಿ ಸ್ವೀಝಲ್ ಫರ್ಟಾಡೊ, ಚಲನಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರು -ಇಂದ್ರಜಿತ್ ಲಂಕೇಶ್, ವಾಸ್ತುಶಿಲ್ಪಿ – ರೇವತಿ ಎಸ್. ಕಾಮತ್ ಹಾಗೂ ಝೆರೋಧಾ ಸಂಸ್ಥಾಪಕರಾದ ನಿತಿನ್ ಮತ್ತು ನಿಖಿಲ್ ಕಾಮತ್ ಅವರ ಮಾತೃ ಶ್ರೀ ಶ್ರೀ ಸ್ಯಾಮಿ ನನ್ವಾನಿ, ಸ್ಯಾಮಿಸ್ ಡ್ರೀಮ್ಲ್ಯಾಂಡ್ನ ಅಧ್ಯಕ್ಷರು, ನಿರ್ಮಾಪಕರು ಮತ್ತು ದಾನಶೀಲರು ಆಗಿರುತ್ತಾರೆ.ಈ ನಾಲ್ವರು ವ್ಯಕ್ತಿಗಳು ಆಗಮಿಸಿ ತಮ್ಮ ಉಪಸ್ಥಿತಿಯಿಂದ ಸಮಾರಂಭಕ್ಕೆ ಮೆರುಗು ನೀಡಿದರು.
ಈ ಅವಳಿ ಯೋಜನೆಗಳ ಅನಾವರಣವು ಸ್ಯಾಮಿಸ್ ಡ್ರೀಮ್ಲ್ಯಾಂಡ್ನ ಪಯಣದಲ್ಲಿ ಒಂದು ಮಹತ್ವಪೂರ್ಣ ಮೈಲಿಗಲ್ಲು, ನೇಚರ್ಸ್ ಬೊಲೆವಾರ್ಡ್ ಮತ್ತು ಸನ್ರೈಸ್ ಬೊಲೆವಾರ್ಡ್ ಎರಡೂ ಯೋಜನೆಗಳು ಪರಿಸರ ಪ್ರಜ್ಞೆಯುಳ್ಳ ಮತ್ತು ಉನ್ನತ ಜೀವನಶೈಲಿ ಹಾಗೂ ಸ್ವಾಸ್ಥ್ಯವನ್ನು ಆಧರಿಸಿದ ನೆಲೆಗಳನ್ನು ನಿರ್ಮಿಸುವಲ್ಲಿ ಸಂಸ್ಥೆಯು ಹೊಂದಿರುವ ಬದ್ಧತೆಯನ್ನು ಪ್ರತಿಫಲಿಸುತ್ತವೆ.