ಬೆಂಗಳೂರು, ಜೂ. 12 :ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರ ʻಕಾಂತಾರ ಚಾಪ್ಟರ್-1ʼ ಸಹ ಕಲಾವಿದ ವಿಜು ವಿ.ಕೆ ಹೃದಯಾಘಾತದಿಂದ ಆಗುಂಬೆಯಲ್ಲಿ ಸಾವನ್ನಪ್ಪಿದ್ದಾರೆ.
ದೈವದ ನೇಮೋತ್ಸವದ ಚಿತ್ರೀಕರಣಕ್ಕಾಗಿ ಕಾಂತಾರ ಚಿತ್ರತಂಡ ಬ್ಯಾಕ್ ವಾಟರ್‌ನಲ್ಲಿ ಸೆಟ್ ಹಾಕಲಾಗಿತ್ತು.ಇದೇ ಚಿತ್ರೀಕರಣದಲ್ಲಿ ಕೇರಳದ ನಟ ಬಿಜು ವಿಕೆ ಭಾಗಿಯಾಗಬೇಕಿತ್ತು. ಚಿತ್ರೀಕರಣಕ್ಕೂ ಮುನ್ನ ಬಿಜು ವಿಕೆ ಅವರು ಮೃತಪಟ್ಟಿದ್ದಾರೆ.
ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ವಿಜು ವಿಕೆ ಕಾಂತರ ಚಲನಚಿತ್ರಕ್ಕಾಗಿ ಆಗುಂಬೆ ಸಮೀಪದ ಯಡೂರಿನ ಹೋಂ ಸ್ಟೇ ಯಲ್ಲಿ ತಂಗಿದ್ದರು. ಬುಧವಾರ ರಾತ್ರಿ ಏಕಾಏಕಿ ವಿಜು ಅವರಿಗೆ ಎದೆ ನೋವು ಕಾಣಿಸಿಕೊಂಡಿ ದ್ದು, ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವ ವೇಳೆ ದಾರಿ ಮಧ್ಯೆ ಅವರು ಸಾವನ್ನಪ್ಪಿದ್ದಾರೆ.
ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.