ಮಂಗಳೂರು, ಆ. 5: ಲಯನ್ ಇಂಟರ್ನ್ಯಾಶನಲ್ 217 ಡಿಯ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅಭಿಲಾಷ ಆ. 9ರಂದು ಸಂಜೆ 4 ಕ್ಕೆ ಇಂಡಿಯಾನಾ ಕನ್ವೆನ್ಯನ್ ಸೆಂಟರ್ನಲ್ಲಿ ನಡೆಯಲಿದೆ ಎಂದು 2025-26ನೇ ಸಾಲಿನ ಜಿಲ್ಲಾ ಗವರ್ನರ್ ಕುಡ್ಲಿ ಅರವಿಂದ್ ಶೆಣೈ ಅವರು ಮಂಗಳವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂದರ್ಭ 13 ಯೋಜನೆಗಳ ಜತೆಗೆ ಮೆಗಾ ಸೇವಾ ಯೋಜನೆಗಳಿಗೂ ಚಾಲನೆ ನೀಡಲಾಗುತ್ತದೆ.ಲಯನ್ಸ್ ಇಂಟರ್ನ್ಯಾಷನಲ್ ಸಂಸ್ಥೆಯು ಜಿಲ್ಲೆ- 317 ಡಿ ನಾಲ್ಕು ಕಂದಾಯ ಜಿಲ್ಲೆ ಗಳಾದ ದಕ್ಷಿಣ ಕನ್ನಡ,ಹಾಸನ,ಕೊಡಗು,ಚಿಕ್ಕಮಗಳೂರುಗಳಲ್ಲಿ120 ಕ್ಲಬ್ ಗಳನ್ನು ಒಳಗೊಂಡಿದೆ.ಈ ವರ್ಷ ಬ್ಯೂಟಿಫುಲ್ ವರ್ಲ್ಡ್ ಸೇವಾ ಹೆಸರಿನೊಂದಿಗೆ 13 ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿದರು.
ಮೆಗಾ ಸೇವಾ ಯೋಜನೆಯಾಗಿ ಗವರ್ನರ್ ಪ್ರಾಜೆಕ್ಟ್ ಮೊಬೈಲ್ ಕಿಚನ್ ಯೋಜನೆ ಅಡಿ 25 ಲಕ್ಷ ರೂ.ನ ಯೋಜನೆಯನ್ನು ಹಮ್ಮಿಕೊಂಡಿದೆ. ಎಲ್ಲ ಕ್ಲಬ್ಗಳ ಹಾಗೂ ದಾನಿಗಳ ಸಹಕಾರದಿಂದ ಇಸ್ಕಾನ್ ವತಿಯಿಂದ ನಡೆಯುವ ಆಹಾರ ಪೂರೈಕೆ ವ್ಯವಸ್ಥೆಗೆ ಮೊಬೈಲ್ ಕಿಚನ್ ಯೋಜನೆಗೆ ಚಾಲನೆ ನೀಡಲಾಗುವುದು. ಎರಡನೆಯ ಮೆಗಾ ಯೋಜನೆಯಾದ ‘ಲಯನ್ಸ್ ವೃಕ್ಷ ಬೀಜಾಂಕುರ’ ಪರಿಸರ ಉಳಿಸುವ ಕಾರ್ಯಕ್ರಮವು ಮುಡಿಪು ಆರ್ಟಿಒ ಪರಿಸರ ಹಾಗೂ ಗುರುಪುರ ಕೈಕಂಬದ ಹೆದ್ದಾರಿ ಬದಿಯಲ್ಲಿ 1000ಗಿಡ ನೆಡುವ ಕಾಠ್ಯಕ್ರಮಕ್ಕೂ ಸಾಂಕೇತಿಕ ಚಾಲನೆ ದೊರೆಯಲಿದೆ ಎಂದರು.
ಪದಗ್ರಹಣವನ್ನು ಅಂತಾರಾಷ್ಟ್ರೀಯ ಮಾಜಿ ನಿರ್ದೇಶಕ, ಲಯನ್ ಕೌನ್ಸಿಲ್ ಇಂಡಿಯಾದ ಕಾರ್ಯದರ್ಶಿ ಪ್ರವೀಣ್ ಚಜ್ಜದ್ ನೆರವೇರಿಸುವರು. ಜಿಲ್ಲಾ ಪ್ರಥಮ ಲಯನ್ಸ್ ಮಹಿಳೆ ಮಮತಾ ಅರವಿಂದ ಶೆಣೈ ಉದ್ಘಾಟಿಸುವರು. ಮುಖ್ಯ ಗವರ್ನರ್ ಪ್ರಾಜೆಕ್ಟ್ ಮೊಬೈಲ್ ಕಿಚನ್ ಯೋಜನೆ ಅಡಿ 25 ಲಕ್ಷ ರೂನ\ ಯೋಜನೆಯನ್ನು ಹಮ್ಮಿಕೊಂಡಿದೆ. ಎಲ್ಲ ಕಟ್ಗಳ ಹಾಗೂ ದಾನಿಗಳ ಸಹಕಾರದಿಂದ ಇಸ್ಕಾನ್ ವತಿಯಿಂದ ನಡೆಯುವ ಆಹಾರ ಪೂರೈಕೆ ವ್ಯವಸ್ಥೆಗೆ ಮೊಬೈಲ್ ಕಿಚನ್ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಪದಗ್ರಹಣ ಸಮಾರಂಭವನ್ನು ಅಂತಾರಾಷ್ಟ್ರೀಯ ಮಾಜಿ ನಿರ್ದೇಶಕ, ಲಯನ್ ಇಂಡಿಯಾದ ಕಾರ್ಯದರ್ಶಿ ಪ್ರವೀಣ್ ಚಜ್ಜದ್ ನೆರವೇರಿಸಲಿದ್ದಾರೆ. ಜಿಲ್ಲಾ ಪ್ರಥಮ ಲಯನ್ಸ್ ಮಹಿಳೆ ಮಮತಾ ಅರವಿಂದ ಶಣೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಂತಾರಾಷ್ಟ್ರೀಯ ಮಾಜಿ ನಿರ್ದೇಶಕರಾದ ಕೆ. ವಂಶಿಧ ಬಾಬು, ವಿ.ವಿ. ಕೃಷ್ಣ ರೆಡ್ಡಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ|| ಎಂ.ಎನ್. ರಾಜೇಂದ್ರ ಕುಮಾರ್, ಮಲ್ಟಿಪಲ್ ಕೌನ್ಸಿಲ್ ಚೇರ್ ಪರ್ಸನ್ ಮೋಹನ್ ಕುಮಾರ್ ಭಾಗವಹಿಸಲಿದ್ದಾರೆ. ಲಯನ್ಸ್ ಜಿಲ್ಲಾ ಡೈರೆಕ್ಟರಿಯನ್ನು ಪ್ರಥಮ ಉಪ ಜಿಲ್ಲಾ ಗವರ್ನರ್ ತಾರಾನಾಥ್ ಎಚ್. ಎಂ. ಬಿಡುಗಡೆಗೊಳಿಸಲಿದ್ದು ದ್ವಿತೀಯ ಉಪ ಜಿಲ್ಲಾ ಗವರ್ನರ್ ಕೆ. ಗೋವರ್ಧನ ಶೆಟ್ಟಿ ಶುಭಾಶಂಸನೆ ಮಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ್ಯಾಬಿನೆಟ್ನ ಎಡಿಷನಲ್ ಸೆಕ್ರೆಟರಿ ಚಂದ್ರಹಾಸ ರೈ, ಕ್ಯಾಬಿನೆಟ್ ಕೋಲಾಧಿಕಾರಿ ಬಾಲಕೃಷ್ಣ ಹೆಗ್ಡೆ ,ಸಾರ್ವಜನಿಕ ಸಂಪರ್ಕಾಧಿಕಾರಿ ಸುದರ್ಶನ್ ಪಡಿಯಾರ್, ಸಮಿತಿಯ ಚೇರ್ ಮನ್ ಹರೀಶ್ ಆಳ್ವ ಸಮಿತಿ ಅಧ್ಯಕ್ಷ ಶ್ರೀಧರರಾಜ್ ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್ ಬಿ. ಉಪಸ್ಥಿತರಿದ್ದರು.