ಮಂಗಳೂರು, ಆ.10 : ಮಂಗಳೂರು ಕರ್ನಾಟಕ ರಾಜ್ಯ ದೇವಾಡಿಗರ ಸಂಘದಿಂದ ದೇವಾಡಿಗ ಸಮಾಜ ಭವನದಲ್ಲಿ ಆಟಿಡೊಂಜಿ ದಿನ ಇತ್ತೀಚೆಗೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕಂಕನಾಡಿ ಪಡೀಲ್ ಲಯನ್ಸ್ ಕ್ಲಬ್ ಅಧ್ಯಕ್ಷ ಲತೀಶ್ ಶೆಟ್ಟಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕಷ್ಟಕರವಾಗಿದ್ದ ಹಿಂದಿನ ಕಾಲದ ಆಟಿ ದಿನಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಚರಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಾಂಸ್ಕೃತಿಕ ಚಿಂತಕಿ ಮಂಜುಳಾ ಪ್ರವೀಣ್ ಶೆಟ್ಟಿ ಅವರು, ಆಟ ತಿಂಗಳಿನ ಪ್ರತಿ ಆಚರಣೆಯೂ ಕರಾವಳಿಯ ಹವಾಗುಣ ಹಾಗೂ ಸಸ್ಯ ಸಂಪತ್ತಿನ ಬಳಕೆಗೆ ಪೂರಕವಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಅಧ್ಯಕ್ಷ ಅಶೋಕ್ ಮೈಲಿ, ಪಾವಂಜೆ ದೇವಾಡಿಗ ಸಮಾಜ ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕ.ರಾ.ದೇ. ಸಂ.ಹಿರಿಯಡ್ಕ ಉಪಸಂಘದ ಅಧ್ಯಕ್ಷ ಎಚ್. ರಾಜೇಂದ್ರ ಕುಮಾರ್, ಷಷ್ಠಿ ರಥ ಸಮರ್ಪಣ ಸಮಿತಿ ಪೊಳಲಿಯ ಅಧ್ಯಕ್ಷ ಕೃಷ್ಣಪ್ಪ ದೇವಾಡಿಗ, ಶ್ರೇಷ್ಠ ವಾದ್ಯ ವಾದಕ, ತಯಾರಕ ಪುತ್ತೂರು ರಾಜರತ್ನಂ ದೇವಾಡಿಗ, ಮಂಗಳ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಮಂಗಳೂರಿನ ಮಹಾಪ್ರಬಂಧಕಿ ಹರಿಣಾಕ್ಷಿ ಎಸ್. ರಾವ್, ಉಪಾಧ್ಯಕ್ಷ ಕರುಣಾಕರ್ ಎಂ.ಎಚ್., ಕೋಶಾಧಿಕಾರಿ ಗೀತಾ ವಿ. ಕಲ್ಯಾಣ್ ಪುರ್, ಮಹಿಳಾ ಸಂಘಟನ ಅಧ್ಯಕ್ಷೆ ಜ್ಯೋತಿ ಪ್ರವೀಣ್, ಯುವ ಸಂಘಟನ ಅಧ್ಯಕ್ಷ ಸುಮಿತ್ ದೇವಾಡಿಗ, ಕಸ್ತೂರಿ ನಾಗೇಶ್ ಅತ್ತಾವರ, ಪುಷ್ಪ ಚಂದ್ರ ಪಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳ ಸಾಧಕರಾದ ಸಂತೋಷ್ ಎಸ್. ದೇವಾಡಿಗ ತಲಪಾಡಿ, ಪುರುಷೋತ್ತಮ ದೇವಾಡಿಗ ಕದ್ರಿ, ಕಮಲಾಕ್ಷ ದೇವಾಡಿಗ ವರ್ಕಾಡಿ, ಭವಾನಿ ದೇವಾಡಿಗ ಮಂಗಳಾದೇವಿ, ಗಂಗಾಧರ ದೇವಾಡಿಗ ಕವಿ, ವಿಕ್ರಂ ದೇವಾಡಿಗ ಚಿತ್ರಾಪುರ ಅವರನ್ನು ಸಮ್ಮಾನಿಸಲಾಯಿತು. ಪ್ರಧಾನ ಕಾರ್ಯದರ್ಶಿ ವೀಣಾ ಗಣೇಶ್ ಸ್ವಾಗತಿಸಿದರು. ರಕ್ಷಿತ್ ಕೆಂಬಾರ್ ವಂದಿಸಿದರು. ಚಂದ್ರಹಾಸ್ ಕಣ್ವ ತೀರ್ಥ ನಿರೂಪಿಸಿದರು.