ಮಂಗಳೂರು, ಅ.17 : ಲಯನ್ಸ್ ಡಿಸ್ಟಿಕ್ಸ್ 317ಡಿಯ ಯೋಜನೆಯಾದ ಲಯನ್ಸ್ ಪ್ರಕೋಷ್ಠದಿಂದ ದೇಶಭಕ್ತಿ ಮತ್ತು ಸಂಗೀತ ಆಚರಣೆಯಾದ ಆಜಾದಿ ಕಾ ಮಹೋತ್ಸವ ಮತ್ತು ‘ಸುಹಾನಾ ಸಫರ್’ ಕಾರ್ಯಕ್ರಮ ಆ.16ರಂದು ನಗರದ ಡೊಂಗರಕೇರಿಯಲ್ಲಿರುವ ಕೆನರಾ ಶ್ರೀ ಸುಧೀಂದ್ರ ಆಡಿಟೋರಿಯಂನಲ್ಲಿ ಇತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಸಂಸದರಾದ ಕ್ಯಾ| ಬ್ರಿಜೇಶ್ ಚೌಟ ಅವರು ಉದ್ಘಾಟಿಸಿ ನಂತರ ಕಾರ್ಯಕ್ರಮಕ್ಕೆ ಶುಭಕೋರಿದರು. ನಂತರ ಶಾಸಕ ವೇದವ್ಯಾಸ ಕಾಮತ್, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ವಾಸುದೇವ ಕಾಮತ್, ಎಂದು ಲಯನ್ಸ್ ಪ್ರಕೋಷ್ಠದ ಜಿಲ್ಲಾ ಸಂಯೋಜಕ ಕುಂಬ್ಳೆ ನರಸಿಂಹ ಪ್ರಭು ಅವರು ಕಾರ್ಯಕ್ರಮಕ್ಕೆ ಶುಭಕೋರಿದರು.


ಕಾರ್ಯಕ್ರಮದಲ್ಲಿ ಎಂದು ಲಯನ್ಸ್ ಪ್ರಕೋಷ್ಠದ ಜಿಲ್ಲಾ ಸಂಯೋಜಕ ಕುಂಬ್ಳೆ ನರಸಿಂಹ ಪ್ರಭು, ಲಯನ್ಸ್ ಜಿಲ್ಲಾ ಗವರ್ನರ್ 317ಡಿಯ ಕುಡಿ ಅರವಿಂದ್ ಶೆಣೈ, ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷ ಎಂ.ರಾಜೇಶ್ ಕಾಮತ್, ಜಿಲ್ಲಾ ನಿರ್ದೇಶನಾಲಯದ ಎಸೋಸಿಯೇಟ್ ಸಂಪಾದಕ ವೆಂಕಟೇಶ್ ಎನ್. ಬಾಳಿಗ ಮತ್ತು ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ನ ಮಂಡಳಿ ಸದಸ್ಯ ಬಸ್ತಿ ಪುರುಷೋತ್ತಮ ಶೆಣೈ ಉಪಸ್ಥಿತರಿದ್ದರು.











