ಮಂಗಳೂರು, ಆ. 28 : ಕೃತರ್ಥ ಪ್ರೊಡಕ್ಷನ್ ನಿರ್ಮಾಣದ ಕನ್ನಡ ಚಲನಚಿತ್ರ, ‘ಕುಡ್ಲ ನಮ್ದು ಊರುʼ ಆಗಸ್ಟ್ 5 ರಂದು ರಾಜ್ಯದ್ಯಂತ ಬಿಡುಗಡೆಯಾಗಲಿದೆ. ಮೊದಲ ಹಂತದಲ್ಲಿ ರಾಜ್ಯದ 70 ಥಿಯೇಟರ್ ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಚಿತ್ರದ ಪ್ರೇಮಿಯರ್ ಶೋ ಈಗಾಗಲೇ ಎರಡು ಕಡೆ ನಡೆದಿದ್ದು ಜನರ ಪ್ರತಿಕ್ರಿಯೆ ಚೆನ್ನಾಗಿದೆ ಎಂದು ಚಿತ್ರದ ನಿರ್ದೇಶಕರು ಹಾಗೂ ನಾಯಕ ನಟರಾದ ದುರ್ಗಾ ಪ್ರಸಾದ್ ಆರ್ ಕೆ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ‘ಕುಡ್ಲ ನಮ್ದು ಊರುʼ ಚಿತ್ರವನ್ನು ವಿಭಿನ್ನ ರೀತಿಯಲ್ಲಿ ತೋರಿಸುವ ಪ್ರಯತ್ನವನ್ನು ಮಾಡಿ ದ್ದೇನೆ. ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್ ಗಳಿದ್ದು, ಚಿತ್ರವು ಉತ್ತಮವಾಗಿ ಮೂಡಿಬಂದಿದೆ ಎಂದರು.
ಅಂಕಿತ ಪದ್ಮ, ಚಿತ್ರ ಗೌಡ,ನರೇಂದ್ರ ಜೈನ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ನಿರ್ದೇಶನ ದುರ್ಗಾ ಪ್ರಸಾದ್ ಆರ್ ಕೆ (ಅಲೋಕ್), ನಿರ್ವಹಿಸಿದ್ದಾರೆ. ನಾಯಕ ನಟರುಗಳಾಗಿ ದುರ್ಗಾ ಪ್ರಸಾದ್ ಆರ್ ಕೆ (ಅಲೋಕ್ ಏಕೆ), ಸ್ವರಾಜ್ ಶೆಟ್ಟಿ, ಲಂಚು ಲಾಲ್ ಕೆ ಎಸ್ ನಟಿಸಿದ್ದಾರೆ. ನಾಯಕಿ ನಟಿಯರುಗಳಾಗಿ ಅನಿಕಾ ಶೆಟ್ಟಿ, ಶ್ರೇಯಾ ಶೆಟ್ಟಿ, ನಯನ ಸಾಲಿಯನ್, ಅಭಿನಯಿಸಿರುತ್ತಾರೆ.ತಾರಾಗಣದಲ್ಲಿ ಪ್ರಕಾಶ್ ತುಮಿ ನಾಡು, ದಿಲೀಪ್ ಕಾರ್ಕಳ, ಪ್ರಜ್ವಲ್ ಪ್ರಶಾಂತ್, ಮಂಜು ಸುವರ್ಣ, ಮತ್ತಿತರು ಇದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರು ಹಾಗೂ ನಾಯಕ ನಟ ದುರ್ಗಾ ಪ್ರಸಾದ್ ಆರ್ ಕೆ (ಅಲೋಕ್),ಮೂಡುಬಿದಿರೆಯ ವಕೀಲರಾದ ಸುರೇಶ್ ಪಿ ಬಿ, ಡಿ ಓ ಪಿ ಮಯೂರ್ ಆರ್ ಶೆಟ್ಟಿ ಸಹಾಯಕ ನಿರ್ದೇಶಕರು ಯತೀಶ್ ಕದ್ರಿ ಚಿತ್ರಕ್ಕೆ ಸಹಕಾರ ನೀಡಿದ ಗೀತಾಂಜಲಿ ಸುವರ್ಣ ಉಪಸ್ಟಿತರಿದ್ದರು.