ಮಂಗಳೂರು, ಸೆ. 02: ಕಲ್ಲಚ್ಚು ಪ್ರಕಾಶನದ ಬೆಳ್ಳಿ ಹಬ್ಬ ರಜತ ರಂಗು ಪ್ರಯುಕ್ತ 16 ನೇ ಆವೃತ್ತಿಯ 2025ರ ಕಲ್ಲಚ್ಚು ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳೂರಿನ ಲಾಲ್ ಬಾಗ್ ಕರಾವಳಿ ಉತ್ಸವ ಮೈದಾನದ ಎದುರಿನ ಹ್ಯಾಟ್ ಹಿಲ್ ನಲ್ಲಿ ಇರುವ ಆಫೀಸರ್ಸ್ ಕ್ಲಬ್ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಮುಖ್ಯ ಅತಿಥಿಯಾದ ಸಾಹಿತಿ ಸಂತೋಷ ಕುಮಾರ ಮೆಹಂದಳೆ ಅವರು ಸಮಾರಂಭವನ್ನು ಉದ್ದೇಶಿಸಿ ಮಾತಾಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಕರ್ನಾಟಕದ ಪಂಚ ಸಾಧಕರಾದ ಡಾ ಎಸ್ ಎಮ್ ಶಿವಪ್ರಕಾಶ್, ಡಾ ಪ್ರಕಾಶ ಕೇಶವ ನಾಡಿಗ್, ಜಬೀವುಲ್ಲಾ ಎಂ ಅಸದ್, ರೆಮೊನಾ ಎವೆಟ್ ಪೆರೇರಾ ಮತ್ತು ಗೋಕಾವಿ ಗೆಳೆಯರ ಬಳಗದ ಪರವಾಗಿ ಜಯಾನಂದ ಮಾದರ ಅವರಿಗೆ ಡಾ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಿದರು. ರಘು ಇಡ್ಕಿದು ಅಭಿನಂದನ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಕಲ್ಲಚ್ಚು ಪ್ರಕಾಶನ ಹೊರ ತಂದಿರುವ ಹಿರಿಯ ಲೇಖಕ ಕಡ್ಕೆ ರಾಮ ಅವಭೃತ ಅವರ ಪರ್ಯಟನಾನುಭವ ಕೃತಿ ಬಿಡುಗಡೆ ನಡೆಯಿತು.ಸಮಾರಂಭದಲ್ಲಿ ಡಾ ಮೀನಾಕ್ಷಿ ರಾಮಚಂದ್ರ, ಡಾ ಶ್ರೀಧರ್ ಅವಭೃತ ಮತ್ತಿತರರು ಉಪಸ್ಥಿತರಿದ್ದರು. ಪ್ರಕಾಶನದ ವ್ಯವಸ್ಥಾಪಕ ಮುಖ್ಯಸ್ಥ ಸಾಹಿತಿ ಮಹೇಶ ಆರ್ ನಾಯಕ್ ಸ್ವಾಗತಿಸಿದರು. ಎನ್ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.