ಮಂಗಳೂರು,ಸೆ. 05 : ರೆಸ್ಟೊಲೆಕ್ಸ್ ಕಾಯಿರ್ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾದ ಡೇವಿಡ್ ಕುರುವಿಲ್ಲಾ ಅವರು ನೋವಾ ಸೇಲ್ಸ್ ಸ್ಟೀಪ್ ಕಂಫರ್ಟ್ಸ್ ಎಂಬ ಹೆಸರಿನ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, ರೆಸ್ಟೊಲೆಕ್ಸ್ ನಾಲ್ಕು ದಶಕಗಳಿಂದ ಗ್ರಾಹಕರ ಅನುಭವಗಳನ್ನು ಹೆಚ್ಚಿಸುತ್ತ ಮತ್ತು ಸೂಕ್ತ ಆಯ್ಕೆಗಳನ್ನು ಬೆಂಬಲಿಸುವತ್ತ ಗಮನಹರಿಸಿದೆ. ಮಂಗಳೂರಿನಲ್ಲಿರುವ ಈ ಹೊಸ ಫ್ರಾಂಚೈಸಿ ಮಳಿಗೆಯು ನಮ್ಮ ಗ್ರಾಹಕರ ಅಗತ್ಯಗಳನ್ನು ಪೂರೈಸಲಿದೆ’ ಎಂದರು.
ಸಂಸ್ಥೆಯ ಪಾಲುದಾರರಾದ ವಿಜಯ ಕಾಮತ್ ಮಾತಾಡಿ, ಸ್ಪ್ರಿಂಗ್, ಕಾಯಿರ್ ಮತ್ತು ಫೋಮ್ ಹಾಸಿಗೆಗಳ ಉತ್ಕೃಷ್ಟ ಶ್ರೇಣಿಗೆ ಹೆಸರುವಾಸಿಯಾದ ಪ್ರಮುಖ ಹಾಸಿಗೆ ಬ್ರಾಂಡ್ ರೆಸ್ಟೊಲೆಕ್ಸ್, ಮಂಗಳೂರಿನ ಬಲ್ಲಾಳ್ ಬಾಗ್ ನಲ್ಲಿ ತನ್ನ ಹೊಸ ವಿಶೇಷ ಫ್ರಾಂಚೈಸಿ ಮಳಿಗೆಗೆ ಶುಕ್ರವಾರ ಚಾಲನೆ ನೀಡಿದೆ. ನೋವಾ ಸೇಲ್ಸ್ ಸ್ಟೀಪ್ ಕಂಫರ್ಟ್ಸ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಮಳಿಗೆಯು ಈ ಪ್ರದೇಶದ ಗ್ರಾಹಕರಿಗೆ ಗುಣಮಟ್ಟದ ನಿದ್ರೆಗೆ ಅಗತ್ಯ ಪರಿಕರಗಳನ್ನು ಒದಗಿಸಲಿದೆ ಎಂದು ಹೇಳಿದರು.
850 ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಈ ಮಳಿಗೆಯು ರೆಸ್ಟೊಲೆಕ್ಸ್ ನ ಸಂಪೂರ್ಣ ಶ್ರೇಣಿಯ ಕೊಡುಗೆಗಳನ್ನು ಒಳಗೊಂಡಿದೆ. ಇದರಲ್ಲಿ ಹಾಸಿಗೆಗಳು, ದಿಂಬುಗಳು, ಬೆಡ್ಶೀಟ್ಗಳು, ಕಂಫರ್ಟರ್ ಗಳು, ಹಾಸಿಗೆ ಕವರ್ಗಳು, ದಿಂಬು ಮತ್ತಿತರ ಉತ್ಪನ್ನಗಳು ಸೇರಿವೆ ಎಂದರು.
ಕಾರ್ಯಕ್ರಮದಲ್ಲಿ ರೆಸ್ಟೊಲೆಕ್ಸ್ ಸಿಇಒ ಸುರೇಶ್ ಬಾಬು ಉಪಸ್ಥಿತರಿದ್ದರು.